ರೂಪವತಿ : ಸಂಚಿಕೆ - 9
ರಾತ್ರಿಯ ಜಾವ ಹನ್ನೆರಡು ಘಂಟೆ ಮೀರಾ ಅಳುತ್ತ ಕುಳಿತಿದ್ದಾಳೆ ದೇವೇಂದ್ರ ಹೋಗಿ ನಾಲ್ಕು ದಿನವಾಯ್ತು ಇನ್ನು ಬಂದಿಲ್ಲ ಎಲ್ಲಿ ಹೋಗಿದ್ದಾರೋ ಒಂದು ಗೊತ್ತಿಲ್ಲ ಪತ್ರಿಕೆಯ ವಿಷಯವಾಗಿ ಕೆಲಸ ಇದೆ ಅಂತ ಹೇಳಿ ಹೋದವರು ಏನಾದರೋ ಗೊತೀಲ್ಲ,
ಪತ್ರಿಕಾ ಬಾತ್ಮಿದಾರರು ಸಹ ದೆವೆಂದ್ರನಿಗಾಗಿ ಯಲ್ಲಾ ಕಡೆ ಹುಡುಕುತ್ತಾ ಇದ್ದಾರೆ ದೇವೇಂದ್ರ ಕಾಣೆಯಾದ ಬಗ್ಗೆ ಗದಗ ನಗರ ಪೊಲೀಸರಿಗೂ ದೂರು ಕೊಡಲಾಗಿದೆ ಆದರೆ ದೇವೇಂದ್ರನ ಸುಳಿವೇ ಸಿಗುತ್ತಾ ಇಲ್ಲ, ಶಾಸಕರ ವರದಿ ಪ್ರಕಟವಾದ ದಿನದಿಂದಲೇ ದೇವೇಂದ್ರ ನಾಮತ್ತೆ ದೇವೇಂದ್ರನ ಅಪಹರಣವಾಯಿತಾ? ಕೊಲೆಯಾಯಿತಾ? ಏನಾಯ್ತು ದೇವೇಂದ್ರನಿಗೆ ಎಂವುದು ಒಂದು ಗೊತ್ತಾಗ್ತಾ ಇಲ್ಲ ಒಂದೇ ಒಂದು ತಂತಿ ಕೂಡ ಇಲ್ಲ ದೆವೆಂದ್ರನಿಂದ.
ಅಮ್ಮ......ಅಪ್ಪ ಬಂದ್ರ ಪ್ರೇಮಳ ಮುಗ್ದ ಸ್ವರ ಕೇಳಿ ಸೋಪಾಮೇಲೆ ಒರಗಿಕೊಂಡು ಮಲಗಿದ್ದ ಮೀರಾ ಯಚ್ಚರಗೊಂಡು ಇನ್ನು ಬಂದಿಲ್ಲ ಮಗು ಇನ್ನೇನೋ ಬರಭಹುದು ಅಂತ ಹೇಳಿ ಅಡುಗೆ ಮನೆಗೆ ಹೋದಳು,
ವೆಂಕಟೇಶ್ ಎದ್ದು ಶಾಲೆಯ ನೋಟ್ಸ್ ಬರೆಯುತ್ತ ಕುಳಿತಿದ್ದ, ಅಡುಗೆ ಮನೆಗೆ ಹೋದ ಮೀರಾ ಏನಾದ್ರೋ ಅಡುಗೆ ಮಾಡಬೇಕು ಅಂತ ನೋಡುತ್ತಾಳೆ ಆದ್ರೆ ಏನು ಇಲ್ಲ ಹಿಟ್ಟು ನಿನ್ನೆಗೆ ಖಾಲಿಯಾಗಿದೆ ದೆವೆಂದ್ರನೇ ಮನೆಯ ಸಂತೆ ಮಾಡುತ್ತಿದ್ದ ಹಣದ ವ್ಯಾವಹಾರವೆಲ್ಲ ದೇವೇಂದ್ರನ ಕೈಯಲ್ಲೇ ಇರುವ ಕಾರಣ ದೇವೇಂದ್ರ ಒಂದೇ ಒಂದು ದಿನ ಮನೇಲಿ ಇಲ್ಲ ಅಂದ್ರೆ ಮನೆಯ ಸ್ತಿತಿ ಚಿಂತಾಜನಕವಾಗುತ್ತಾ ಇತ್ತು. ಅಮ್ಮ ಹಸಿವು ಆಗ್ತಾ ಇದೆ ಅಂತ ಪ್ರೇಮ ಅಳಲು ಆರಂಬಿಸಿದಳು ಅದನ್ನು ನೀಡಿದ ತಾಯಿ ಇರುವ ಸ್ವಲ್ಪ ಹಿಟ್ಟನ್ನೇ ಅದರಲ್ಲಿ ನೀರು ಮತ್ತು ಉಪ್ಪು ಹಾಕಿ ಕುಡಿಸಿ ಕೊಟ್ಟಳು, ಈಗ ಹಿಟ್ಟೆನೋ ಮಾಡಿ ಕೊಟ್ಟೆ ಆದರೆ ಮದ್ಯಾನ ರಾತ್ರಿ ಏನು ಮಾಡೋದು ಅಂತ ಚಿಂತಿಸುತ್ತಾ ಅಳುತ್ತ ಸುಮ್ಮನೆ ಕುಳಿತುಕೊಂಡಳು ಮೀರಾ
ವೆಂಕಟೇಶ್ ಎದ್ದು ತಂಬಿಗೆ (ಕೊಡ) ಹಿಡಿದುಕೊಂಡು ನಿರಿಗೆ ಹೋರಟ ರೈಲ್ವೆ ಸ್ಟೇಷನ್ ಗೆ ಬೆಟಗೇರಿ ಜನಕ್ಕೆ ಕುಡಿಯಲು ಧಾರಾಳವಾಗಿ ನೀರು ದೊರೆಯುವ ಒಂದೇ ಒಂದು ಸ್ಥಳ, ರೈಲ್ವೆ ಸ್ಟೇಷನ್ ತಲುಪುತ್ತಲೇ ವೆಂಕಟೇಶ್ ಸರಸರನೇ ಗೊದಾಮಿನತ್ತ ಹೆಜ್ಜೆ ಹಾಕಿದ ಅವನ ಎಣಿಕೆ ಸರಿ ಇತ್ತು ರಾಶಿ ರಾಶಿಯಾಗಿ ಚಲ್ಲಿತ್ತು ಅಕ್ಕಿ, ಅತೀವ ಸಂತಸಗೊಂಡ ವೆಂಕಟೇಶ್ ಅಕ್ಕಿಯನ್ನು ನೀರಿಗಾಗಿ ತಂದಿದ್ದ ಬಿಂದಿಗೆಯಲ್ಲಿ ತುಂಬಿಸಿಕೊಳ್ಳಲು ತೊಡಗಿದ ಸುತ್ತಲೂ ದೃಷ್ಟಿಸುತ್ತ ಬತ್ತ ತುಂಬುವ ಕಾರ್ಯದಲ್ಲಿ ತೊಡಗಿದ ವೆಂಕಟ್ ಹಿಂದಿರುಗಿಯೂ ನೋಡದೆ ಅಕ್ಕಿಯನ್ನು ತಂಬಿಗೆಯಲ್ಲಿ ತುಂಬಿಸುತ್ತಾ ಇದ್ದಾನೆ ಸಡನ್ ಆಗಿ ಯಾರೋ ಜೋರಾಗಿ ಕಟ್ಟಿಗೆಯಿಂದ ಹೊಡೆದ ಅನುಭವ ಹೆದರಿ ತಿರುಗಿ ನೋಡಿದ ಅಷ್ಟೇ ಅಧುರಿಹೋದ ವೆಂಕಟೇಶ್. RPF ಪೋಲಿಸ್ ಬೆತ್ತವನ್ನು ಹಿಡಿದು ಮತ್ತೊಮ್ಮೆ ಹೊಡೆಯಲು ಮುಂದೆ ಬಂದ ವೆಂಕಟೇಶ್ ಅಳಲು ಅಂಗಲಾಚಲು ಆರಂಬ ಮಾಡಿದ ಎಷ್ಟು ಬೇಡಿಕೊಂಡರೂ ಕೇಳದ RPF ಪೋಲಿಸ್ ವೆಂಕಟ್ ನನ್ನು ರೈಲ್ವೆ ಪೋಲಿಸ್ ಸ್ಟೇಷನ್ ಗೆ ಕರೆದೊಯ್ದು ಕೂಡಿಹಾಕಿದರು,
ವೆಂಕಟೇಶ್ ಅಳುತ್ತಲೇ ಇದ್ದಾನೆ ಏನು ಮಾಡಬೇಕು ಅನ್ನೋದೇ ಗೊತ್ತಾಗುತ್ತಾ ಇಲ್ಲ ಶಾಲೆಯ ಸಮಯ ಮಿರಿ ಹೋಯಿತು ಆ ದಿನ ಶಾಲೆಗೇ ಹೋಗಲು ಸಾದ್ಯವಿಲ್ಲ ಸುಮ್ಮನೆ ಒಂದು ಮೂಲೆಯಲ್ಲಿ ಕುಳಿತುಕೊಂಡ ವೆಂಕಟೇಶ್.
ಸಮಯ ತನ್ನ ಪಾಡಿಗೆ ಸಾಗುತ್ತಲೇ ಇದೆ ಮದ್ಯಾನ 1 ಘಂಟೆ. ಮನೆಯಲ್ಲಿ ಮೀರಾ ಜೋರಾಗಿ ಅಳುತ್ತ ಇದ್ದಾಳೆ ಇತ್ತ ಗಂಡ ಪತ್ತೆ ಇಲ್ಲ ಎನಾದನೋ ಗೊತ್ತಿಲ್ಲ ನೀರಿಗೆ ಹೋದ ಮಗ ಕೂಡ ಮದ್ಯಾನ ಆದರೂ ಪತ್ತೆ ಇಲ್ಲ, ತಾಯಿ ಕರುಳು ಹಿಂಡಿದ ಅನುಭವ. ಮಗನನ್ನು ಹುಡುಕಲು ಹೊರಗೆ ಹೋಗಬೇಕು ಅಂದ್ರೆ ಆಗೋಲ್ಲ ಹೊರಗೆ ಹೋದ ವಿಷಯ ಗಂಡನಿಗೆ ಗೊತ್ತಾದ್ರೆ ಕೊಂದು ಬಿಡುತ್ತಾನೆ. ಏನು ಮಾಡಬೇಕು ಅಂತ ತಿಳಿಯದೇ ಕಿಟಕಿಯಿಂದ ಪಕ್ಕದ ಮನೆಯ ಹುಡುಗನೊಬ್ಬನನ್ನು ಕೂಗಿ ಕರೆದು ರೈಲ್ವೆ ಸ್ಟೇಷನ್ ಗೆ ಹೋಗಿ ಸ್ವಲ್ಪ ವೆಂಕಟೇಶ್ ನನ್ನು ಹುಡುಕಿ ಬಾ ಬೆಳಿಗ್ಗೆ ಹೋದವ ಇನ್ನು ಬಂದಿಲ್ಲ ಎಂದು ಬೇಡಿಕೊಂಡಳು, ಪಾಪ ಹುಡುಗ ವೆಂಕಟೇಶ್ ನನ್ನು ಹುಡುಕಲು ಹೋರಟ.
ರೈಲ್ವೆ ಪೋಲಿಸ್ ಸ್ಟೇಷನ್ ಹೊರಗಿನಿಂದ ಬಂದ ಇನ್ಸ್ಪೆಕ್ಟರ್ ವೆಂಕಟೇಶ್ ನನ್ನು ನೋಡಿ ಮಾತಾಡಿಸಿದ. ವೆಂಕಟೇಶ್ ನ ಕ್ಲಾಸ್ ಮೆಟ್ ಒಬ್ಬರ ತಂದೆ ಇನ್ಸ್ಪೆಕ್ಟರ್ ವೆಂಕಟೇಶ್ ನನ್ನು ಕೆಲವು ಬಾರಿ ನೋಡಿದ್ದ. ನಡೆದ ಸಂಗತಿ ಏನು ಅಂತ ತಿಳಿದು ಮತ್ತೊಮ್ಮೆ ಹೀಗೆ ಮಾಡಬೇಡ ಅಂತ ಹೇಳಿ ಮನೆಗೆ ಕಳಿಸಿಬಿಟ್ಟ.
ಸಂತೋಷಗೊಂಡ ವೆಂಕಟೇಶ್ ಮನೆಯತ್ತ ಹೆಜ್ಜೆ ಹಾಕಿದ ಬರುವಾಗ ಮತ್ತೆ ರೈಲ್ವೆ ಗುದಾಮ ದಿಂದಲೇ ಬರುತ್ತಿರುವಾಗ ರಾಶಿ ರಾಶಿ ಚಲ್ಲಿರುವ ಅಕ್ಕಿಯನ್ನು ನೋಡಿ ಮತ್ತೆ ಬಿಂದಿಗೆಯಲ್ಲಿ ತುಂಬಿಸಿಕೊಳ್ಳಲು ತೊಡಗಿದ...
ಮುಂದಿನ ಸಂಚಿಕೆಯಲ್ಲಿ

No comments:
Post a Comment