Followers

Thursday, June 21, 2018

ನನ್ನ ಬಗ್ಗೆ

ನಾನು ಬರಹಗಾರನಲ್ಲ ನಾನು ಬರೆದದ್ದು ಬರಹಗಳೂ ಅಲ್ಲ ಇವು ಬರಿ ಮನಸಿನ ಮಾತುಗಳು ಕಾರಭಾರಿಯ ಕನಸುಗಳು 

ನನ್ನ ಬಗ್ಗೆ ಒಂದಿಷ್ಟು 

ಹೆಸರು:
ರಾ ದೇ ಕಾರಭಾರಿ (ನಿಮಗೆ ಇರುವ ಮುಖ ಪರಿಚಯ)
ವೆಂಕಟೇಶ (ನನ್ನವರು ನನ್ನ ಪ್ರೀತಿಯಿಂದ ಕರೆಯುವುದು)

ಉರು: 
ಹುಟ್ಟಿದ್ದು ಗಂಡು ಮೆಟ್ಟಿನ ನಾಡು ಕರ್ನಾಟಕದ "ಗದಗ" 
ಮದುವೆಯಾಗಿದ್ದು ಉತ್ತರ ಕರ್ನಾಟಕ ಬಾಗಲಕೋಟ ಪಟ್ಟಣದ ಮತಾಂತರದ ರಕ್ಕಸಿ "ಮಂಜುಳಾ"ಳನ್ನು 
ಹೊಟ್ಟೆಪಾಡಿಗೆ ಹೋಗಿ ಇಳಿದುಕೊಂಡಿದ್ದೆ ತುಳು ನಾಡು "ಮಂಗಳೂರು" ರಿನಲ್ಲಿ
ಆದ್ರೆ ತುಳು ಅರ್ತ ಆಪುಜಿ 
ಹೆಚ್ಚು ಹೊಟ್ಟೆ ಹಸಿವು ಆಗಿದ್ದಕ್ಕೆ ಹೊಗಿದ್ದು ಏಳು ಸಮುದ್ರದಾಚೆಯ "ದುಬೈ" 
ಮತಾಂತರವೆಂಬ ರಕ್ಕಸನ ಧಾಹಕ್ಕೆ ತುತ್ತಾಗಿ 
ಮನವರಿತ ಬಳಿಕ 
ಬಂದಿದ್ದು ಮತ್ತೆ ನನ್ನ ಜನ್ಮಭೂಮಿ 
ಗದಗ 

ಜಾತಿ:
ದೇವರು ಉಂಟುಮಾಡಿದ್ದು ಎರಡೇ ಜಾತಿ ಒಂದು ಗಂಡು ಇನ್ನೊಂದು ಹೆಣ್ಣು 
ಕುಲ: ಗೊತ್ತಿಲ್ಲ 
ನಕ್ಷತ್ರ: ತಿಳಿದಿಲ್ಲ
ಧರ್ಮ: ಭಾರತಿಯ 
ಆದರೆ ಮತಭ್ರಾಂತನಾಗಿ ಮಡದಿಯ ಮೋಹಕ್ಕೊಳಗಾಗಿ 
2006 ರಿಂದ 2013 ರ ವರೆಗೆ 
ಕ್ರೈಸ್ತ ಧರ್ಮಿಯನಾಗಿ ಧರ್ಮಭೊದಕನಾಗಿದ್ದೆ


ಕುಟುಂಬ:
ಹೆಂಡತಿಯಾಗಿದ್ದವಳು ಯೇಸುವಿನೊಂದಿಗೆ ಓಡಿಹೊದಳು
ಕುಟುಂಬಕ್ಕಿಂತ ಅವಳಿಗೆ ಕ್ರೈಸ್ತರ ಸಂಗ ಬೇಕಂತೆ
 ಅವಳು ಕದ್ದುಕೊಂಡು ಹೋದ ನನ್ನ ಸಂಪತ್ತು ಅಂದ್ರೆ
ಮಗ: ವಿನಿತ್ 
ಮಗಳು: ವಿನುತಾ 
ಅವಳು ಕದ್ದುಕೊಂಡು ಹೊಗಿದ್ದು ತುಂಬಾ ಅದಾವುದು ನನಗೆ 
ಅಮೂಲ್ಯವಲ್ಲ 

ಭಾಷೆ: ಕನ್ನಡ 

ವಿದ್ಯಾಭಾಸ: 
ವಾದ ಮಾಡೋರಿಗೆ ಪ್ರತಿವಾದ ಮಾಡೋವಷ್ಟು ಬುದ್ದಿ ಇದೆ 
ಕನಸಾಗಿಯೇ ಉಳಿದದ್ದು : 
MA/PhD  ಮಾಡಬೇಕೆಂಬ ಬಯಕೆ 

ಗುರಿ:
ತಪ್ಪಿಹೋಗಿದೆ 


ಪ್ರಶಸ್ತಿಗಳು:
ನಾಡಿನ ಎಷ್ಟೋ ಹುಡುಗಿಯರು ಪ್ರೀತಿಯಿಂದ ಕರೆಯುವ
 (ಅಣ್ಣ - ಅಪ್ಪಾಜಿ) 
ನನಗಿದೆ ಸಾಕು 

ಬರಹಗಳು:
ಬರೆದದ್ದು ತುಂಬಾ ಪತ್ರಿಕೆಗಳಲ್ಲಿ ಇನ್ನೂ ಬರಿತಾನೇ ಇದ್ದೆನೆ 
1998 ರಿಂದ ಬರಿತಾ ಇದ್ದೆನೆ  ವರ್ಷಗಳ ಬಳಿಕ ನೆನಪಿನಲ್ಲಿ ಉಳಿದದ್ದು ಸ್ವಲ್ಪ ಆದರೂ ಮುಸುಕು ಮುಸುಕು ನೆನಪಿನಂಗಳದಿಂದ 
ಸುಧಾ, ಮಯೂರ, ಕಸ್ತೂರಿ, ನವೋದಯ, ನಾಗರಿಕ, ಹಸಿರು ಕ್ರಾಂತಿ, 
ಚಕ್ರವರ್ತಿ, ಕ್ರೈಂ ನ್ಯೂಸ್, ಇನ್ನು ಅನೇಕ ಸರಿಯಾಗಿ ನೆನಪಿಲ್ಲ 

ಸಂಪಾದಕನಾಗಿ:
ವಜ್ರಾಯುಧ ವಾರ ಪತ್ರಿಕೆ 
ಜನಸೇವಾ ಪ್ರಣಾಳಿಕೆ
ಕನಸು ಮಕ್ಕಳ ಪತ್ರಿಕೆ

ಸ್ವಂತ ಪತ್ರಿಕೆ 

"ಮಹಾಪಾಪಿ" 

ಮತ್ತೊಂದು ಹೋಸ ಮತ್ರಿಕೆ ಆರಂಬಿಸುತ್ತಿದ್ದೆನೆ
"ಡಿಜಿಟಲ್ ಟೈಮ್ಸ ಆಪ ಇಂಡಿಯಾ" 
ದಿನ ಪತ್ರಿಕೆ
ರಾ ದೇ ಕಾರಭಾರಿ 
9663082890 / 8861994467

ಇನ್ನೂ ಡುಕುತ್ತಿದ್ದೆನೆ 
"ರೂಪವತಿ" 


Thursday, June 7, 2018

ಸಂಚಿಕೆ : 9

ರೂಪವತಿ : ಸಂಚಿಕೆ - 9

ರಾತ್ರಿಯ ಜಾವ ಹನ್ನೆರಡು ಘಂಟೆ ಮೀರಾ ಅಳುತ್ತ ಕುಳಿತಿದ್ದಾಳೆ ದೇವೇಂದ್ರ ಹೋಗಿ ನಾಲ್ಕು ದಿನವಾಯ್ತು ಇನ್ನು ಬಂದಿಲ್ಲ ಎಲ್ಲಿ ಹೋಗಿದ್ದಾರೋ ಒಂದು ಗೊತ್ತಿಲ್ಲ ಪತ್ರಿಕೆಯ ವಿಷಯವಾಗಿ ಕೆಲಸ ಇದೆ ಅಂತ ಹೇಳಿ ಹೋದವರು ಏನಾದರೋ ಗೊತೀಲ್ಲ,
ಪತ್ರಿಕಾ ಬಾತ್ಮಿದಾರರು ಸಹ ದೆವೆಂದ್ರನಿಗಾಗಿ ಯಲ್ಲಾ ಕಡೆ ಹುಡುಕುತ್ತಾ ಇದ್ದಾರೆ ದೇವೇಂದ್ರ ಕಾಣೆಯಾದ ಬಗ್ಗೆ ಗದಗ ನಗರ ಪೊಲೀಸರಿಗೂ ದೂರು ಕೊಡಲಾಗಿದೆ ಆದರೆ ದೇವೇಂದ್ರನ ಸುಳಿವೇ ಸಿಗುತ್ತಾ ಇಲ್ಲ, ಶಾಸಕರ ವರದಿ ಪ್ರಕಟವಾದ ದಿನದಿಂದಲೇ ದೇವೇಂದ್ರ ನಾಮತ್ತೆ ದೇವೇಂದ್ರನ ಅಪಹರಣವಾಯಿತಾ? ಕೊಲೆಯಾಯಿತಾ? ಏನಾಯ್ತು ದೇವೇಂದ್ರನಿಗೆ ಎಂವುದು ಒಂದು ಗೊತ್ತಾಗ್ತಾ ಇಲ್ಲ ಒಂದೇ ಒಂದು ತಂತಿ ಕೂಡ ಇಲ್ಲ ದೆವೆಂದ್ರನಿಂದ.
 ಅಮ್ಮ......ಅಪ್ಪ ಬಂದ್ರ ಪ್ರೇಮಳ ಮುಗ್ದ ಸ್ವರ ಕೇಳಿ ಸೋಪಾಮೇಲೆ ಒರಗಿಕೊಂಡು ಮಲಗಿದ್ದ ಮೀರಾ ಯಚ್ಚರಗೊಂಡು ಇನ್ನು ಬಂದಿಲ್ಲ ಮಗು ಇನ್ನೇನೋ ಬರಭಹುದು ಅಂತ ಹೇಳಿ ಅಡುಗೆ ಮನೆಗೆ ಹೋದಳು,
ವೆಂಕಟೇಶ್ ಎದ್ದು ಶಾಲೆಯ ನೋಟ್ಸ್ ಬರೆಯುತ್ತ ಕುಳಿತಿದ್ದ, ಅಡುಗೆ ಮನೆಗೆ ಹೋದ ಮೀರಾ ಏನಾದ್ರೋ ಅಡುಗೆ ಮಾಡಬೇಕು ಅಂತ ನೋಡುತ್ತಾಳೆ ಆದ್ರೆ ಏನು ಇಲ್ಲ ಹಿಟ್ಟು ನಿನ್ನೆಗೆ ಖಾಲಿಯಾಗಿದೆ ದೆವೆಂದ್ರನೇ ಮನೆಯ ಸಂತೆ ಮಾಡುತ್ತಿದ್ದ ಹಣದ ವ್ಯಾವಹಾರವೆಲ್ಲ ದೇವೇಂದ್ರನ ಕೈಯಲ್ಲೇ ಇರುವ ಕಾರಣ ದೇವೇಂದ್ರ ಒಂದೇ ಒಂದು ದಿನ ಮನೇಲಿ ಇಲ್ಲ ಅಂದ್ರೆ ಮನೆಯ ಸ್ತಿತಿ ಚಿಂತಾಜನಕವಾಗುತ್ತಾ ಇತ್ತು. ಅಮ್ಮ ಹಸಿವು ಆಗ್ತಾ ಇದೆ ಅಂತ ಪ್ರೇಮ ಅಳಲು ಆರಂಬಿಸಿದಳು ಅದನ್ನು ನೀಡಿದ ತಾಯಿ ಇರುವ ಸ್ವಲ್ಪ ಹಿಟ್ಟನ್ನೇ ಅದರಲ್ಲಿ ನೀರು ಮತ್ತು ಉಪ್ಪು ಹಾಕಿ ಕುಡಿಸಿ ಕೊಟ್ಟಳು, ಈಗ ಹಿಟ್ಟೆನೋ ಮಾಡಿ ಕೊಟ್ಟೆ ಆದರೆ ಮದ್ಯಾನ ರಾತ್ರಿ ಏನು ಮಾಡೋದು ಅಂತ ಚಿಂತಿಸುತ್ತಾ ಅಳುತ್ತ ಸುಮ್ಮನೆ ಕುಳಿತುಕೊಂಡಳು ಮೀರಾ
ವೆಂಕಟೇಶ್ ಎದ್ದು ತಂಬಿಗೆ (ಕೊಡ) ಹಿಡಿದುಕೊಂಡು ನಿರಿಗೆ ಹೋರಟ ರೈಲ್ವೆ ಸ್ಟೇಷನ್ ಗೆ ಬೆಟಗೇರಿ ಜನಕ್ಕೆ ಕುಡಿಯಲು ಧಾರಾಳವಾಗಿ ನೀರು ದೊರೆಯುವ ಒಂದೇ ಒಂದು ಸ್ಥಳ, ರೈಲ್ವೆ ಸ್ಟೇಷನ್ ತಲುಪುತ್ತಲೇ ವೆಂಕಟೇಶ್ ಸರಸರನೇ ಗೊದಾಮಿನತ್ತ ಹೆಜ್ಜೆ ಹಾಕಿದ ಅವನ ಎಣಿಕೆ ಸರಿ ಇತ್ತು ರಾಶಿ ರಾಶಿಯಾಗಿ ಚಲ್ಲಿತ್ತು ಅಕ್ಕಿ, ಅತೀವ ಸಂತಸಗೊಂಡ ವೆಂಕಟೇಶ್ ಅಕ್ಕಿಯನ್ನು ನೀರಿಗಾಗಿ ತಂದಿದ್ದ ಬಿಂದಿಗೆಯಲ್ಲಿ ತುಂಬಿಸಿಕೊಳ್ಳಲು ತೊಡಗಿದ ಸುತ್ತಲೂ ದೃಷ್ಟಿಸುತ್ತ ಬತ್ತ ತುಂಬುವ ಕಾರ್ಯದಲ್ಲಿ ತೊಡಗಿದ ವೆಂಕಟ್ ಹಿಂದಿರುಗಿಯೂ ನೋಡದೆ ಅಕ್ಕಿಯನ್ನು ತಂಬಿಗೆಯಲ್ಲಿ ತುಂಬಿಸುತ್ತಾ ಇದ್ದಾನೆ ಸಡನ್ ಆಗಿ ಯಾರೋ ಜೋರಾಗಿ ಕಟ್ಟಿಗೆಯಿಂದ ಹೊಡೆದ ಅನುಭವ ಹೆದರಿ ತಿರುಗಿ ನೋಡಿದ ಅಷ್ಟೇ ಅಧುರಿಹೋದ ವೆಂಕಟೇಶ್. RPF ಪೋಲಿಸ್ ಬೆತ್ತವನ್ನು ಹಿಡಿದು ಮತ್ತೊಮ್ಮೆ ಹೊಡೆಯಲು ಮುಂದೆ ಬಂದ ವೆಂಕಟೇಶ್ ಅಳಲು ಅಂಗಲಾಚಲು ಆರಂಬ ಮಾಡಿದ ಎಷ್ಟು ಬೇಡಿಕೊಂಡರೂ ಕೇಳದ RPF ಪೋಲಿಸ್ ವೆಂಕಟ್ ನನ್ನು ರೈಲ್ವೆ ಪೋಲಿಸ್ ಸ್ಟೇಷನ್ ಗೆ ಕರೆದೊಯ್ದು ಕೂಡಿಹಾಕಿದರು,
ವೆಂಕಟೇಶ್ ಅಳುತ್ತಲೇ ಇದ್ದಾನೆ ಏನು ಮಾಡಬೇಕು ಅನ್ನೋದೇ ಗೊತ್ತಾಗುತ್ತಾ ಇಲ್ಲ ಶಾಲೆಯ ಸಮಯ ಮಿರಿ ಹೋಯಿತು ಆ ದಿನ ಶಾಲೆಗೇ ಹೋಗಲು ಸಾದ್ಯವಿಲ್ಲ ಸುಮ್ಮನೆ ಒಂದು ಮೂಲೆಯಲ್ಲಿ ಕುಳಿತುಕೊಂಡ ವೆಂಕಟೇಶ್.
ಸಮಯ ತನ್ನ ಪಾಡಿಗೆ ಸಾಗುತ್ತಲೇ ಇದೆ ಮದ್ಯಾನ 1 ಘಂಟೆ. ಮನೆಯಲ್ಲಿ ಮೀರಾ ಜೋರಾಗಿ ಅಳುತ್ತ ಇದ್ದಾಳೆ ಇತ್ತ ಗಂಡ ಪತ್ತೆ ಇಲ್ಲ ಎನಾದನೋ ಗೊತ್ತಿಲ್ಲ ನೀರಿಗೆ ಹೋದ ಮಗ ಕೂಡ ಮದ್ಯಾನ ಆದರೂ ಪತ್ತೆ ಇಲ್ಲ, ತಾಯಿ ಕರುಳು ಹಿಂಡಿದ ಅನುಭವ. ಮಗನನ್ನು ಹುಡುಕಲು ಹೊರಗೆ ಹೋಗಬೇಕು ಅಂದ್ರೆ ಆಗೋಲ್ಲ ಹೊರಗೆ ಹೋದ ವಿಷಯ ಗಂಡನಿಗೆ ಗೊತ್ತಾದ್ರೆ ಕೊಂದು ಬಿಡುತ್ತಾನೆ. ಏನು ಮಾಡಬೇಕು ಅಂತ ತಿಳಿಯದೇ ಕಿಟಕಿಯಿಂದ ಪಕ್ಕದ ಮನೆಯ ಹುಡುಗನೊಬ್ಬನನ್ನು ಕೂಗಿ ಕರೆದು ರೈಲ್ವೆ ಸ್ಟೇಷನ್ ಗೆ ಹೋಗಿ ಸ್ವಲ್ಪ ವೆಂಕಟೇಶ್ ನನ್ನು ಹುಡುಕಿ ಬಾ ಬೆಳಿಗ್ಗೆ ಹೋದವ ಇನ್ನು ಬಂದಿಲ್ಲ ಎಂದು ಬೇಡಿಕೊಂಡಳು, ಪಾಪ ಹುಡುಗ ವೆಂಕಟೇಶ್ ನನ್ನು ಹುಡುಕಲು ಹೋರಟ.
 ರೈಲ್ವೆ ಪೋಲಿಸ್ ಸ್ಟೇಷನ್ ಹೊರಗಿನಿಂದ ಬಂದ ಇನ್ಸ್ಪೆಕ್ಟರ್ ವೆಂಕಟೇಶ್ ನನ್ನು ನೋಡಿ ಮಾತಾಡಿಸಿದ. ವೆಂಕಟೇಶ್ ನ ಕ್ಲಾಸ್ ಮೆಟ್ ಒಬ್ಬರ ತಂದೆ ಇನ್ಸ್ಪೆಕ್ಟರ್ ವೆಂಕಟೇಶ್ ನನ್ನು ಕೆಲವು ಬಾರಿ ನೋಡಿದ್ದ. ನಡೆದ ಸಂಗತಿ ಏನು ಅಂತ ತಿಳಿದು ಮತ್ತೊಮ್ಮೆ ಹೀಗೆ ಮಾಡಬೇಡ ಅಂತ ಹೇಳಿ ಮನೆಗೆ ಕಳಿಸಿಬಿಟ್ಟ.
ಸಂತೋಷಗೊಂಡ ವೆಂಕಟೇಶ್ ಮನೆಯತ್ತ ಹೆಜ್ಜೆ ಹಾಕಿದ ಬರುವಾಗ ಮತ್ತೆ ರೈಲ್ವೆ ಗುದಾಮ ದಿಂದಲೇ ಬರುತ್ತಿರುವಾಗ ರಾಶಿ ರಾಶಿ ಚಲ್ಲಿರುವ ಅಕ್ಕಿಯನ್ನು ನೋಡಿ ಮತ್ತೆ ಬಿಂದಿಗೆಯಲ್ಲಿ ತುಂಬಿಸಿಕೊಳ್ಳಲು ತೊಡಗಿದ...

ಮುಂದಿನ ಸಂಚಿಕೆಯಲ್ಲಿ

Tuesday, May 29, 2018

ರೂಪವತಿ : ಸಂಚಿಕೆ - 8

ರೂಪವತಿ : ಸಂಚಿಕೆ - 8

ದೇವೇಂದ್ರ ಎದ್ದು ಸ್ನಾನ ಮಾಡಿ ದೇವರ ಕೋಣೆಗೆ ಹೋದ ಪೂಜೆ ಮುಗಿಸಿ ಹೊರಬರುವ ಹೊತ್ತಿಗೆ ಬಾತ್ಮಿದಾರರು ಮನೆಯಲ್ಲಿ ಬಂದು ದೇವೇಂದ್ರನ ದಾರಿ ಕಾಯುತ್ತಾ ಇದ್ದರು ನಿನ್ನೆ ಕುಡಿತದ ನಶೆ ಹೆಚ್ಚಾಗಿ ಮಲಗಿದ್ದು ಯ ಚ್ಚರವಾಗಿದ್ದು ಸರಿ ಮದ್ಯಾನ 12 ರ ಸುಮಾರಿಗೆ. ದೇವರ ಕೋಣೆಯಿಂದ ಹೊರಬಂದು ತನ್ನ ಚೇರ್ ಮೇಲೆ ಕುಳಿತು ತುಟಿಗೆ ಸಿಗರೆಟ್ ಅಂಟಿಸಿ ಬಾತ್ಮಿದಾರರ ಜೊತೆ ಮಾತಿಗಿಳಿದ (ಬಾತ್ಮಿದಾರ) ದೇವೇಂದ್ರ ರವರೇ ಮುಂಜಾನೆಯಿಂದ ಇಡಿ ಜಿಲ್ಲೆಯ ಯಲ್ಲ ಪುಸ್ತಕ ಮಳಿಗೆಗಳಿಂದ ಪತ್ರಿಕೆಗಳು ಒಂದು ಉಳಿಯದಂತೆ ಮಾರಾಟವಾಗಿವೆ (ದೇವೇಂದ್ರ) ತುಂಬಾ ಸಂತೋಷದ ಸಂಗತಿ ಜಿಲ್ಲೆಯಲ್ಲಿ ಮೊದಲ ಬಾರಿ ಒಂದು ಚಿಕ್ಕ ಪತ್ರಿಕೆಯ ಸಾಧನೆ ಹಃ ಹಃ ಹಃ (ಬಾತ್ಮಿದಾರ) ಆದರೆ ಮತ್ತೊಂದು ವಿಷಯ ಯಲ್ಲ ಪ್ರತಿಗಳು ಮಾರಾಟವಾಗಿದ್ದರೂ ತುಂಬಾ ಜನರಿಗೆ ವಿಷಯ ಗೊತ್ತಾಗಿಲ್ಲ (ದೇವೇಂದ್ರ) ಇದು ಹೇಗೆ ಸಾದ್ಯ (ಯಲ್ಲ ಪುಸ್ತಕ ಮಳಿಗೆಗಳಿಂದ ಇರುವ ಯಲ್ಲ ಪ್ರತಿಗಳು ಒಬ್ಬನೇ ವ್ಯಕ್ತಿ ಕೊಂಡು ಹೋದ ಅಂತ ನಮಗೆ ಮಾಹಿತಿ ಬಂದಿದೆ, ಪತ್ರಿಕೆಯಲ್ಲಿ ಬಂದ ಶಾಸಕರ ವರದಿ ಜನರಿಗೆ ಗೊತ್ತಾಗಿ ಓದಬೇಕು ಅಂತ ಪ್ರತಿಗಳನ್ನು ಹುಡುಕುತ್ತಾ ಇದ್ದಾರೆ ಆದರೆ ಪ್ರತಿಗಳು ಸಿಗುತ್ತಾ ಇಲ್ಲ. ಮರು ಮುದ್ರಣವಾಗುತ್ತಾ ಇದೆ ಇನ್ನು ಅರ್ದ ಘಂಟೆಯಲ್ಲಿ ಪ್ರತಿಗಳು ಮುದ್ರನಗೊಳ್ಳುತ್ತೆ (ದೇವೇಂದ್ರ) ಶಹಬ್ಬಾಸ್ ಒಳ್ಳೆ ಕೆಲಸ ಮಾಡಿದ್ರಿ ಪತ್ರಿಕೆ ಮತ್ತೆ ಯಲ್ಲ ಮಳಿಗೆಗಳಿಗೂ ಕಳಿಸಿಬಿಡಿ (ಬಾತ್ಮಿದಾರ) ಆದ್ರೆ ದೇವೇಂದ್ರ ರವರೆ ಆ ವ್ಯಕ್ತಿ ಮತ್ತೆ ಬಂದು ಪತ್ರಿಕೆ ಕೊಂಡು ಹೋಗಿ ಬಿಟ್ಟರೆ ಏನು ಮಾಡೋದು (ದೇವೇಂದ್ರ) ಅದು ನಿಜ ಮುದ್ರಣಗೊಂಡ ಪ್ರತಿಗಳನ್ನು ಮಳಿಗೆಗಳಿಗೆ ಸಾಗಿಸಿ ಮತ್ತೆ ಮರುಮುದ್ರಣ ಮಾಡಿ ಮತ್ತೊಮ್ಮೆ ಮರು ಮುದ್ರಣಗೊಂಡ ಪ್ರತಿಗಳನ್ನು ನೇರ ಇಲ್ಲಿಗೆ ತಗೆದುಕೊಂಡು ಬನ್ನಿ ಏನಾದ್ರೋ ಆಲೋಚನೆ ಮಾಡೋಣ. ಬಾತ್ಮಿದಾರರು ದೇವೇಂದ್ರ ಸೂಚಿಸಿದ ಕೆಲಸದಲ್ಲಿ ತಲ್ಲಿನರಾಗಲು ಧಾವಿಸಿದರು ದೇವೇಂದ್ರ ಮತ್ತೊಂದು ಸಿಗರೇಟಿಗೆ ಬೆಂಕಿ ತಗುಲಿಸಿದ. ದೇವೇಂದ್ರ ತುಂಬಾ ಆಲೋಚನೆ ಮಾಡುತ್ತಾ ಇದ್ದಾನೆ ಪತ್ರಿಕೆ ಜನರ ಕೈಗೆ ತಲುಪಬೇಕಾದರೆ ಏನು ಮಾಡಬೇಕು ಅಯ್ಯೋ ಆಲೋಚನೆ ಮಾಡಿ ಮಾಡಿ ಸಾಕಾಯ್ತು ಸಿಗರೇಟಿನ ತುಂಡುಗಳು Ash Tray ನಲ್ಲಿ ತುಂಬುತ್ತಾ ಇದೆ ಸಿಗರೇಟಿನ ಹೋಗೆ ಕೋಣೆತುಂಬಾ ತುಂಬಿರುವ ಕಾರಣ ಕೋಣೆ ಮಂದವಾಗಿ ಕಾಣುತ್ತಾ ಇದೆ ದೇವೇಂದ್ರ ಏನೋ ಆಲೋಚನೆ ಮಾಡಿಕೊಂಡು ಜಗತ್ತನ್ನೇ ಗೆದ್ದುಕೊಂದಂತೆ ಗಹಗಹಿಸಿ ನಗುತ್ತ ಪೇಪರ್ ಪ್ಯಾಡ್ ಮೇಲೆ ಏನೋ ಬರೆಯಲು ಆರಂಬ ಮಾಡಿದ ಅರ್ದ ಘಂಟೆ ಬರೆದಾದ ಮೇಲೆ ಬರೆದ ಆ ಕಾಗದವನ್ನು ದಿಟ್ಟಿಸಿ ನೋಡಿ “ಗದಗ ಜಿಲ್ಲಾ ಪತ್ರಿಕಾ ರಂಗದಲ್ಲೊಂದು ಹೋದ ಪರ್ವದ ಆರಂಬ” ಮತ್ತೆ ನಕ್ಕು ಮತ್ತೊಂದು ಸಿಗರೇಟು ಅಂಟಿಸಬೇಕು ಅನ್ನುವಷ್ಟರಲ್ಲಿ ಮನೆ ಮುಂದೆ ವಾಹನವೊಂದು ಬಂದು ನಿಂತಿತು. ದೇವೇಂದ್ರ ವಾಹನದತ್ತ ದೃಷ್ಟಿ ಹಾಯಿಸಿದ ನಮ್ಮ ಕಾರ್ಯಾಲಯದ ಸಿಬ್ಬಂದಿ ಪ್ರಕಟಗೊಂಡ ಮೂರನೇ ಮುದ್ರಣದ ಪ್ರತಿಗಳ ಬಾಕ್ಸ್ ಅನ್ನು ತಂದಿದ್ದರು. ದೇವೇಂದ್ರ ಸಿಗರೇಟನ್ನು ಬಿಸ್ಹಾಕಿ ಹೊರಬಂದ ಜೊತೆಗೆ ಬಂದಿದ್ದ ಬಾತ್ಮಿದಾರರು ಏನೋ ಸಾಧನೆ ಮಾಡಿ ಜಯಿಸಿದ ಹಾಗೆ ಮಂದಹಾಸದಿಂದ ಇದ್ದರು, (ಬಾತ್ಮಿದಾರ) ದೇವೇಂದ್ರ ರವರೆ ಪರ್ತಿಕೆ ಎರಡನೇ ಮುದ್ರಣ ಮತ್ತೆ ಯಲ್ಲ ಮಳಿಗೆಗಳಿಗೆ ಹೋಗಿದೆ ಮೂರನೇ ಮುದ್ರಣ ಇಲ್ಲಿ ತಂದಿದ್ದೇವೆ ಈಗ ಹೇಳಿ ಇದನ್ನು ಏನು ಮಾಡೋಣ? (ದೇವೇಂದ್ರ) ನೋಟ್ ಪ್ಯಾಡ್ ನಲ್ಲಿ ಬರೆದುಕೊಂಡ ಸಂಗತಿಗಳನ್ನು ಮತ್ತೊಮ್ಮೆ ನೋಡಿ ಮುಗುಳ್ನಕ್ಕು ವರದಿಗಾರರಿಗೆ ತೋರಿಸಿದ ಕೆಂಪು ಇಂಕ್ ನಿಂದ ನಾಟ್ ಪ್ಯಾಡ್ ಮೇಲೆ ಬರೆದಿತ್ತು “ಗದಗ ಜಿಲ್ಲಾ ಪತ್ರಿಕಾ ರಂಗದಲ್ಲೊಂದು ಹೋದ ಪರ್ವದ ಆರಂಬ” (ಬಾತ್ಮಿದಾರ) ದೇವೇಂದ್ರ ರವರೆ ತುಂಬಾ ಸಂತೋಷ ಆದರೆ ಇದು ಹೇಗೆ ಅಂತ ಸ್ವಲ್ಪ ಬಿಡಿಸಿ ಹೇಳಿ (ದೇವೇಂದ್ರ) ಇವತ್ತು ಯಲ್ಲ ಜನರಿಗೆ ಪತ್ರಿಕೆ ಸೇರೋ ಹಾಗೆ ನಾವೆಲ್ಲಾ ಸೇರಿ ಒಂದು ಹೊಸ ಸಾಹಸ ಮಾಡಬೇಕು, ಪ್ರತಿಯೊಬ್ಬರೂ ಪರ್ರಿಕೆಗಳನ್ನು ಹಾಕ್ಕೊಂಡು ಇಡಿ ಜಿಲ್ಲೆಯ ಪ್ರತಿಯೊಂದು ಪಾನ್ ಶಾಪ್ (ಬಿಡಾ ಅಂಗಡಿ) ಗಳಿಗೆ ಕೊಡಬೇಕು, ಇಲ್ಲಿವರೆಗೂ ನಾವು ಪ್ರತಿ ಮಾರಾಟಕ್ಕೆ 1೦% ಕಮಿಷನ್ ಕೊಡುತ್ತಾ ಇದ್ದೆವು ಈಗ ಅದನ್ನು 25% ಹೆಚ್ಚು ಮಾಡಿ ಪ್ರತಿ ಬಿಡಾ ಅಂಗಡಿಗಳಿಗೆ ಕೊಡಿ, ಪ್ರತಿಗಳು ಮಾರಾಟವಾದ ಬಳಿಕ ಹಣ ಕೊಡೋಕೆ ಹೇಳಿ ಪತ್ರಿಕೆ ತಾನಾಗೇ ಜನರ ಬಳಿಗೆ ತಲುಪುತ್ತೆ. ಇಡಿ ಜಿಲ್ಲೆಯನ್ನು ಜಾಲಾಡಿ ಪ್ರತಿಗಳನ್ನು ಕೊಂಡು ನಾಶಮಾಡೋದು ಆಗದ ಮಾತು ಹಾಗೊಂದು ವೇಳೆ ಅಂತಹ ಸಾಹಸ ಮಾಡಿದರೂ ಸಹ ಎಲ್ಲಿ ಎಲ್ಲಿ ಪ್ರತಿಗಳು ಮಾರಾಟವಾಗುತ್ತಾ ಇದೆ ಅಂತ ಆಲೋಚಿಸುವುದರೊಳಗೆ ಪತ್ರಿಕೆಗಳನ್ನು ಜನ ಓದಿರುತ್ತಾರೆ (ಬಾತ್ಮಿದಾರ) ದೇವೇಂದ್ರ ರವರೆ ಒಳ್ಳೆ ಸೂಚನೆ ಖಂಡಿತ ಈ ತಂತ್ರ ಕೆಲಸ ಕೊಡುತ್ತೆ (ದೇವೇಂದ್ರ) ಹಾಗಾದ್ರೆ ಇನ್ನು ತಡ ಮಾಡಬೇಡಿ ಹೋಗಿ ನಿಮಗೆ ಬೇಕಾದವರನ್ನು ಸೇರಿಸಿ ಅವರ ಜೊತೆ ಸಹ ಪತ್ರಿಕೆ ಹಂಚಿಕೆ ಮಾಡೋಕೆ ಹೇಳಿ, ಸಮಯ ಬಂದರೆ ನಾಲ್ಕನೆಯ ಮುದ್ರಣ ಕೂಡ ಮಾಡೋಣ “ಕಾಳಿಂಗ ನಾಗ” ವಾರ ಪತ್ರಿಕೆ ಕೇವಲ ಜಿಲ್ಲೆಯಲ್ಲಷ್ಟೇ ಅಲ್ಲ ಇಡಿ ಕರ್ನಾಟಕಕ್ಕೆ ಸಿಂಹ ಸ್ವಪ್ನ ವಾಗಬೇಕು ದೇವೇಂದ್ರ ಸಿಗರೆಟ್ ತೆಗೆದು ತುಟಿಗಂಟಿಸಿ ಅದಕ್ಕೆ ಬೆಂಕಿ ತಗುಗಿಸಿದ. ಹೆಂಡತಿಯನ್ನು ಕೂಗಿ ಮೀರಾ.. ನನಗೆ ಸ್ವಲ್ಪ ಹೊರಗಡೆ ಕೆಲಸ ಇದೆ ನಾನು ಹೋಗಿ ಬರುವೆ ದೇವೇಂದ್ರ ಹೆಂಡತಿಯ ಉತ್ತರಕ್ಕೂ ಕಾಯದೆ ಸರಸರನೆ ಹೊರನಡೆದ ಸ್ವಪ್ನ ಬಾರ್ ಮನೆಯ ತುಂಬಾ ಸಮೀಪಕ್ಕೆ ಇರುವ ದೇವೇಂದ್ರನ ಇಷ್ಟದ ಸರಾಯಿ ಅಡ್ಡಾ, ದೇವೇಂದ್ರ ಕುಳಿತು ಒಂದು ಕ್ವಾಟರ್ ಓಲ್ಡ್ ಮಂಕ್ ಆರ್ಡರ್ ಮಾಡಿದ ಜೊತೆಗೆ ಒಂದು ಪ್ಯಾಕೆಟ್ ಚಾರ್ ಮಿನಾರ್, ಪಾಕೆಟ್ ನಲ್ಲಿ ಉಳಿದಿದ್ದ ಒಂದೇ ಸಿಗರೇಟಿಗೆ ಬೆಂಕಿ ತಗುಲಿಸಿ ಆಲೋಚನೆಯಲ್ಲಿ ಲಿನವಾದ, ಮುಂದಿನ ವಾರದ ಮುದ್ರಣಕ್ಕಾಗಿ ಹಾಟ್ ನ್ಯೂಸ್ ಯಾವುದು, ಈ ವಾರ ಶಾಸಕನ ಹಣೆಬರಹ ಗೊತ್ತಾಗುತ್ತೆ ಮುಂದಿನ ವಾರ.................... ಹೀಗೆ ಆಲೋಚನೆ ಮಾಡುತ್ತಿರುವಾಗಲೇ ಸರ್ವರ್ ಬಂದು ಗ್ಲಾಸ್ ಮತ್ತು ಸಿಸೆಯನ್ನು ಟೇಬಲ್ ಮೇಲಿಟ್ಟ.

ಮುಂದಿನ ಸಂಚಿಕೆಯಲ್ಲಿ

Sunday, May 27, 2018

ರೂಪವತಿ : ಸಂಚಿಕೆ - 7

ರೂಪವತಿ : ಸಂಚಿಕೆ - 7

ದೇವೇಂದ್ರ ಸರಸರನೆ ಬರುತ್ತಾ ಇದ್ದಾನೆ ಮನೆಗೆ ಹೋಗುವ ಲಗುಬಗೆಯಲ್ಲಿ ಸ್ಟೇಷನ್  ಒಂದು ಅಂಚಿನಲ್ಲಿ ತಟ್ಟನೆ ನಿಂತುಬಿಟ್ಟ ದೇವೇಂದ್ರನ ಮನಸಲ್ಲಿ ಏನೋ ಗೊಂದಲ ಏನು ಮಾಡಬೇಕು ಅಂತ ತಿಳಿಯದೆ ಅರ್ದ ಅಹಂತೆ ಅಲ್ಲೇ ನಿಂತ 3 ಸಿಗರೇಟನ್ನು ಸುಟ್ಟುಹಾಕಿದ ಕೊನೆಗೆ ಏನೋ ನಿರ್ದರಿಸಿಕೊಂಡು ಸರಸರನೆ ಪಕ್ಕದಲ್ಲೇ ಇದ್ದ ಸ್ವಪ್ನ ಬಾರ್ ನತ್ತ ಧಾವಿಸಿ ಮೇಜಿನಲ್ಲಿ ಕುಳಿತು ಆರ್ಡರ್ ಮಾಡಿದ “ಒಂದು ಕ್ವಾಟರ್ ಓಲ್ಡ್ ಮ೦ಕ್” ಮತ್ತೆ ಸಿಗರೇಟು ತೆಗೆದು ಅದಕ್ಕೆ ಬೆಂಕಿ ತಗುಲಿಸಿದ. ತಲೆಯಲ್ಲಿ ಪೂರ್ಣ ನಾಳೆ ಏನಾಗುತ್ತೋ ಅನ್ನೋ ಯೋಚನೆ ಮಗ ಹೇಗಿದ್ದಾನೋ ಅನ್ನೋ ತವಕ ಇದೆ ಯೋಚನೆಯಲ್ಲಿ ಬಾರ್ ಗೆ ಬಂದು ಕುಡಿಯಲು ಕುಳಿತುಕೊಂಡ. ಸಿಗರೇಟಿನ ಜೊತೆ ಸರಾಯಿ ಕುಡಿಯುತ್ತ ಕುಳಿತ ದೇವೇಂದ್ರ ಕುಡಿತದಲ್ಲೇ ಮಗ್ನನಾದ ಏನೇನೋ ಗುನುಗುಟ್ಟುತ್ತಾ ಇದ್ದಾನೆ ಒಬ್ಬನೇ ಮಾತಾಡ್ತಾ ಇದ್ದಾನೆ “ವೆಂಕಟ್ ಸಾರಿ ಕಣೋ ಮಗಾ ನಿನ್ನೆ ಇಡಿ ರಾತ್ರಿ ಕಾಡಿನಲ್ಲಿ ನಿನ್ನನ್ನು ಇಟ್ಟಿದ್ದೆ ನಾನು ಒಳ್ಳೆ ತಂದೆ ಅಲ್ಲ” I Love you ಕಣೋ ನೀನು ನನ್ನ ಪಾಲಿನ ಅದೃಷ್ಟದ ಹರಳು ನೀನು ಹುಟ್ಟಿದ ಮೇಲೆ ನಾನು ಪತ್ರಕರ್ತ, ಹೀಗೆ ಗುಣುಗುಟ್ಟುತ್ತಾ ಮತ್ತಷ್ಟು ಕುಡಿದ ತಟ್ಟನೆ ದೇವೇಂದ್ರನಿಗೆ ನೆನಪಾಗಿದ್ದು ಉಮಾ, ಹೇ ನನ್ನ ಮುದ್ದಿನ ರಾಣಿ ನಾ ನಿನ್ನ ನೋಡಬೇಕು ಕಣೆ ನಿ ನನಗೆ ಬೇಕೇ ಬೇಕು ನೀನಿಲ್ಲದೆ ನಾ ಬದುಕೊಲ್ಲ ನಂಗೆ ನೀನು ಬೇಕು ನಂಗೆ ನೀನು ಬೇಕು ನಂಗೆ ನೀನು ಬೇಕು ಐ ಲವ್ ಯೂ ಮೈ ಡಾರ್ಲಿಂಗ್...... ಹೀಗೆ ಗುಣಗುತ್ತುತ್ತಾ ಇದ್ದ ದೇವೇಂದ್ರನಿಗೆ ಯಾರೋ ಅಲ್ಲಾಡಿಸುತ್ತಿರುವ ಅನುಭವ.. ಹೇ ಯಾವನಲೇ ಅವನು........... ಸಾರ್ ತುಂಬಾ ಟೈಮ್ ಆಯಿತು ಬಾರ್ ಕ್ಲೋಸ್ ಮಾಡುತ್ತಾ ಇದ್ದೇವೆ ಹೋಗಿ ಮನೆಗೆ (ಬಾರ್ ಸರ್ವರ್ ನ ಸ್ವರ)... ಓಕೇ ಮೈ ಬಾಯ್ ಸರ್ವರ್ ಗೆ ಟಿಪ್ ಕೊಟ್ಟು ತೋರಾಡುತ್ತ ಅಲ್ಲಿಂದ ಮೇಲೆದ್ದ ದೇವೇಂದ್ರ ಮನೆ ಕಡೆ ಹೆಜ್ಜೆಹಾಕಿದ. ಬೆಳಿಗ್ಗೆ ಹೋದ ದೇವೇಂದ್ರ ಇನ್ನು ಮನೆಗೆ ಬರಲಿಲ್ಲ ರಾತ್ರಿ 12 ಆಗೋಕೆ ಬಂತು ಇನ್ನು ಮಲಗದೇ ದೇವೇಂದ್ರನ ದಾರಿ ಕಾಯುತ್ತ ಕುಳಿತಿದ್ದಾಳೆ ಮೀರಾ ದೇವೇಂದ್ರ ಕುಡಿತ ಬಿಟ್ಟ ಅನ್ನೋ ಸಂತೋಷ ಮನೆಮಾಡಿದೆ ಇನ್ನು ಉಟ ಸಹ ಮಾಡದೆ ಗಂಡನ ಜೊತೆಗೂಡಿ ಉಟ ಮಾಡಬೇಕು ಅಂತ ಮೀರಾ ಕಾಯುತ್ತಾ ಇದ್ದಾಳೆ ವೆಂಕಟೇಶನಿಗೆ ಸ್ವಲ್ಪ ಗುಣವಾಗಿದೆ ಮಲಗಿದ್ದಾನೆ ಪ್ರೇಮ ಮತ್ತು ಗಿರೀಶ ಕೂಡ ಮಗಗಿದ್ದಾರೆ ಗರ್ಬಿಣಿ ಮೀರಾ ಗಂಡನ ದಾರಿ ಕಾಯುತ್ತ ಹಾಗೆ ಕುಳಿತುಕೊಂದವಳು ಸ್ವಲ್ಪ ನಿದ್ರೆ ಬಂದಂತೆ ಸೋಫಾ ಮೇಲೆ ಸುಮ್ಮನೆ ವರಗಿಕೊಂದಿದ್ದಾಳೆ “ ಕಬಿನಾ ಕಬಿ ಕಹಿ ನಾ ಕಹಿ ಕೊಯಿನಾ ಕೊಯಿತೋ ಆಯೇಗಾ..... ಕಬಿನಾ ಕಬಿ” ಮೀರಾಳ ಕಿವಿಗೆ ಪಟ್ಟನೆ ಅಪ್ಪಳಿಸಿತು ಹಿಂದಿ ಸಂಗಿತದ ಕರ್ಕಷ ಧ್ವನಿ, ದೇವರೇ ಮೀರಾಳ ಪ್ರಾಣವೇ ಹೋದ ಅನುಭವ ಯಾಕೆಂದ್ರೆ ಇದು ಗಂಡನ ಸ್ವರ ಯಾವಾಗಲು ಕುಡಿದಾಗ ಗಂಡ ಕರ್ಕಷವಾಗಿ ಹಾಡುವ ಹಿಂದಿ ಸಂಗೀತ, ಕುಡಿತ ಬಿಡುತ್ತೇನೇ ಅನ್ನೋದು ಕೆಲವ ನಾಟಕ ಬಣ್ಣದ ಮಾತು ಅಂತ ಅಳಲು ಆರಂಬ ಮಾಡಿದಳು ಮೀರಾಳಿಗೆ ಅತಿವ ದುಕ್ಕವಾಗಿ ಕಣ್ಣಿರು ತಾನಾಗೇ ಇಳಿಯಲು ಆರಂಬವಾಯಿತು... ಹೊಯ್........ ಟಕ್ ಟಕ್ ಟಕ್ ಬಾಗಿಲು ಬಡಿಯುವ ಶಬ್ದ ದೇವೇಂದ್ರ ಬಾಗಿಲು ತಟ್ಟುತ್ತ ಇದ್ದ.. ಲೇ ಬೇಗನೆ ಬಾಗಿಲ ತಗೆ ಒಳಗೆ ಏನ್ ಮಾಡುತ್ತಾ ಇದ್ದೀಯ, ಯಾರಿದ್ದಾರೆ ಒಳಗೆ......ಹೇಯ್, ಅಳುತ್ತಿದ್ದ ಮೀರಾ ಕಣ್ಣು ಒರೆಸಿ ಬಂದು ಬಾಗಿಲು ತೆರೆಯೋದರೊಳಗೆ ದೇವೇಂದ್ರ ಚಿರಾಡಲು ಸುರು ಮಾಡಿಕೊಂಡ, ಅಪ್ಪನ ಸ್ವರ ಕೇಳುತ್ತಲೇ ಮಕ್ಕಳೆಲ್ಲ ನಿದ್ದೆಯಿಂದ ಯಚ್ಚರಗೊಂಡು ನಡುಗಲು ಸುರು ಮಾಡಿಕೊಂಡರು, ಮೀರಾ ಬಾಗಿಲು ತೆರೆಯುತ್ತಲೇ ಧಡಾರನೆ ಬಿದ್ದು ಹೊಡೆತ ಕಾಲಿನಿಂದ ಒದ್ದ ಹೊಡೆತಕ್ಕೆ ಕ್ಷಣ ಮೂರ್ಚೆ ಹೋದಂತೆ ಆಯಿತು ಮಿರಾಳಿಗೆ ದೊಡ್ಡ ಬಂಡೆಗಲ್ಲು ಯದೆಮೇಲೆ ಬಂದು ಅಪ್ಪಳಿಸಿದ ಅನುಭವ. ಯಾಕೆ ಬೇಗನೆ ಬಾಗಿಲು ತಗೆಯಲಿಲ್ಲ ಮನೆಯಲ್ಲಿ ಮತ್ತಾರು ಇದ್ದರು ಅನ್ನೋ ವಿಷಯವನ್ನು ಮುಂದಿಟ್ಟುಕೊಂಡು ದೇವೇಂದ್ರ ಮೀರಾಳಿಗೆ ಮನಬಂದಂತೆ ಥಳಿಸಿದ ಬಿಡಿಸಲು ಹೋದ ವೆಂಕಟೇಶನಿಗೆ ಸಹ ಒದೆತ ಬಿದ್ದಿತ್ತು ಪ್ರೇಮ ಮತ್ತು ಪುಟ್ಟ ಮಗು ಗಿರೀಶ ಕೂಡ ಹೊಡೆತಕ್ಕೆ ತತ್ತರಿಸಿ ಹೋಗಿದ್ದರು, ಮನೆ ರಣರಂಗವಾಗಿತ್ತು ಮನೆಯಲ್ಲಿ ಕಿರುಚಾಡುವ ಶಬ್ದ ಸುತ್ತಲು ಯಲ್ಲರಿಗೂ ಕೇಳಿಸಿದರೂ ಸಹ ಯಾರು ಬಿಡಿಸೋಕೆ ಬರೋಲ್ಲ ದಿನಾ ಸಾಯೋಗಿಗೆ ಅಳೋರು ಯಾರು ಎಂಬುದೇ ಜನರ ಆಲೋಚನೆಯಾಗಿತ್ತು. ಸಿಗರೇಟು ಹಚ್ಚಿಕೊಂಡು ಸೇದುತ್ತಿದ್ದ ದೇವೇಂದ್ರ ಮೀರಾಳ ದೇಹದ ಮೇಲೆ ಸಿಗರೆಟಿನಿಂದ ಸುಟ್ಟು ಹಾಕಿದ ಕಿಟಾರನೆ ಕಿರುಚಿಕೊಂಡಳು ಮೀರಾ. ಕಿರುಚಿ ನನ್ನ ಮರ್ಯಾದೆ ತೆಗೆತಿಯಾ ಅಂತ ಮತ್ತಷ್ಟು ಹೊಡೆದ... ಅಳುತ್ತ ಕುಳಿತುಕೊಂಡಿದ್ದರು ಮಕ್ಕಳು ತಾವು ಅಳುತ್ತಿರುವ ಶಬ್ದವೇ ಹೊರಬರಬಾರದು ಅಂತ ತುಂಬಾ ಯಚ್ಚರಿಕೆವಹಿಸಿ ಅಳುತ್ತಾ ಇದ್ದರು ಅಳುವ ಶಬ್ದ ಕೇಳಿದರೆ ಯಲ್ಲಿ ಅಪ್ಪ ಬಂದು ಹೊಡಿತಾನೆ ಅನ್ನೋ ಹೆದರಿಕೆ ಮಕ್ಕಳಿಗೆ, ಮೀರಾ ಒಂದು ಮೂಲೆಯಲ್ಲಿ ಕುಳಿತಿದ್ದಾಳೆ ಅಳುತ್ತಿದ್ದಾಳೆ ನರಳುತ್ತಿದ್ದಾಳೆ ಅದು ಶಬ್ದವಿಲ್ಲದ ನರಳಾಟ, ಕುಡಿತದ ಅಮಲಿನಲ್ಲಿ ಜೋರಾಗಿ ಚಿರಾಡುತ್ತಿದ್ದ ದೇವೇಂದ್ರ ಬಿದ್ದುಕೊಂಡ ನೆಲದಲ್ಲೇ ಮಲಗಿಬಿಟ್ಟ ಅಳುತ್ತ ಕುಳಿತುಕೊಂಡಳು ಮೀರಾ ತಾಯಿಯ ಯೇದೆಗೊರಗಿಕೊಂಡು ಮಕ್ಕಳು ಕೂಡ ಅಳುತ್ತ ಅಲ್ಲೇ ನಿದ್ದೆ ಹೋದವು.

ಮುಂದಿನ ಸಂಚಿಕೆಯಲ್ಲಿ

Saturday, May 26, 2018

ರೂಪವತಿ : ಸಂಚಿಕೆ - 6

ಕಾಳಿಂಗ ನಾಗ ಪತ್ರಿಕಾ ಕಾರ್ಯಾಲಯ ಪತ್ರಿಕೆ ಮುದ್ರಣ ಕಾರ್ಯದಲ್ಲಿ ಬಾತ್ಮಿದಾರರು ಮಗ್ನರಾಗಿದ್ದಾರೆ ಯಲ್ಲರಿಗೂ ಕುತೊಹಲ ಪತ್ರಿಕೆ ಪ್ರಕಟವಾದ ಕೂಡಲೇ ಜನರ ಪ್ರತಿಕ್ರಿಯೆ ಏನು ಒಬ್ಬ ಪ್ರಭಾವಿ ರಾಜಕೀಯ ವ್ಯಕ್ತಿಯ ಕುರಿತು ಸಂಚಲನವುಂಟು ಮಾಡುವ ಪ್ರಮುಖ ವರದಿ ಮುದ್ರಣಗೊಳ್ಳುತ್ತಾ ಇದೆ ಪತ್ರಿಕೆ ಪ್ರಭಾವದಿಂದ ಅಧಿಕ ಪ್ರಭಾವಕ್ಕೆ ಹೋಗುತ್ತೆ ಅನ್ನೋ ಉತ್ಸಾಹ ಯಲ್ಲಾ ಬಾತ್ಮಿದಾರರಲ್ಲೂ ಮನೆಮಾಡಿಕೊಂಡಿತ್ತು ಮುದ್ರಣಕಾರರು ಅಕ್ಷರ ಜೋಡಣಾ ಕಾರ್ಯದಲ್ಲಿ ಮಗ್ನರಾಗಿದ್ದರು. ಅದು ಚಲಿಗಾಳವಾದರೂ ಅವರು ಬೆವರುತ್ತಿದ್ದಾರೆ ನಾಳೆ ಏನಾಗುತ್ತೆ ಯಲ್ಲರಿಗೂ ಕಾಡುತ್ತಿರುವ ಯಕ್ಷಪ್ರಶ್ನೆ ಒಬ್ಬ ಸಾಮಾನ್ಯ ರಾಜಕೀಯ ವ್ಯಕ್ತಿ ಏಕಾಏಕಿ ಶ್ರೀಮಂತ ಆಗಿದ್ದು ಹೇಗೆ ? ಜನರ ಮುಂದೆ ಇರುವ ಉತ್ತರವಿಲ್ಲದ ಪ್ರಶ್ನೆಗೆ ದೇವೇಂದ್ರನ ಬಳಿ ಉತ್ತರವಿತ್ತು ಆ ಉತ್ತರ ಜನರ ಮುಂದೆ ಪ್ರದರ್ಷಿಸುವುದಕ್ಕಾಗಿ ದೇವೇಂದ್ರ ಸಿದ್ದತೆ ಮಾಡಿಕೊಂಡಿದ್ದ ಅದಕ್ಕೆ ಬೇಕಾಗುವ ಕೆಲವು ಭಾವಚಿತ್ರಗಳು ಒಬ್ಬರ ಬಳಿ ಇದ್ದವು ಆ ಭಾವಚಿತ್ರಗಳನ್ನು ಪಡೆದುಕೊಳ್ಳಲು ದೇವೇಂದ್ರ ಅಣ್ಣಿಗೇರಿ ಗ್ರಾಮಕ್ಕೆ ಬಂದಿದ್ದ ಅದೊಂದು ಚಿಕ್ಕ ಹಳ್ಳಿ ಗದಗ ಪಟ್ಟಣದಿಂದ ಸ್ವಲ್ಪ ದೂರದಲ್ಲಿರುವ ಆ ಹಳ್ಳಿ ದೇವೇಂದ್ರ ಒಂದು ಮನೆಯ ಮುಂದೆ ನಿಂತು ಬಾಗಿಲು ತಟ್ಟಿದ ಬಾಗಿಲು ತೆರೆದುಕೊಂಡಿತು ಒಳಗೆ ಹೋದ ದೇವೇಂದ್ರ 10 ನಿಮಿಷದಲ್ಲಿ ಹೊರಗೆ ಬಂದ ದೇವೇಂದ್ರನ ಕೈಲಿ ಒಂದು ಕವರ್ ಇತ್ತು. ಅಯ್ಯೋ.......... ಪತ್ರಿಕೆ ಪ್ರಿಂಟ್ ಆಗೋಕೆ ರೆಡಿಯಾಗಿದೆ ಒಂದೇ ಒಂದು ಪೋಟೋ ಬಂದ್ರೆ ಸಾಕು ಪತ್ರಿಕೆ ಪೂರ್ಣ ಬಾತ್ಮಿದಾರರು ದೇವೇಂದ್ರನ ದಾರಿ ಕಾಯುತ್ತಾ ಇದ್ದಾರೆ ಬೆಳಿಗ್ಗೆ ಹೋದ ದೇವೇಂದ್ರ ಇನ್ನು ಬರಲಿಲ್ಲ ಬಾತ್ಮಿದಾರರಿಗೆ ಚಿಂತೆಯಾಗಿದೆ ............. ಅದೇ ಹೊತ್ತಿಗೆ ದೇವೇಂದ್ರ ಕಚೇರಿ ಪ್ರವೇಶಿಸಿದ ಬಂದವನೇ ಜೊತೆಗೆ ತಂದಿದ್ದ ಪೋಟೋ ಬ್ಲಾಕ್ ಮುದ್ರಣಕ್ಕೆ ಕೊಟ್ಟು ತನ್ನ ಚೇರ್ ನಲ್ಲಿ ಕುಳಿತು ತುಟಿಗೆ ಸಿಗರೆಟ್ ಅಂಟಿಸಿ ಬೆಂಕಿ ತಗುಲಿಸಿದ ,,,,,,, ಸಿಗರೇಟಿನ ಹೋಗೆ ಸುರುಳಿಯಾಗಿ ಗಾಳಿಯಲ್ಲಿ ಲಿನವಾಗುತ್ತಾ ಇತ್ತು ಅತ್ತ ಪತ್ರಿಕೆ ಪ್ರಕಟವಾಗುತ್ತಾ ಇತ್ತು ವೆಂಕಟೇಶ್ ನಿಗೆ ಇನ್ನು ಪೂರ್ಣ ಗುಣವಾಗಿಲ್ಲ ಇನ್ನೂ ಜ್ವರ ಹಾಗೆಯೇ ಇದೆ ಮೈ ಸುಡುತ್ತಾ ಇದೆ ಮೀರಾ ಮಗನ ಆರೈಕೆ ಮಾಡೋದರಲ್ಲಿ ಮಗ್ನಗೊಂಡಿದ್ದಾಳೆ ಪ್ರೇಮ ಶಾಲೆಯಿಂದ ಬಂದು ಅಣ್ಣನ ಪಕ್ಕದಲ್ಲಿ ಸುಮ್ಮನೆ ಕುಳಿತುಕೊಂಡಳು ಮೀರಾ ಅಡುಗೆ ಮನೆ ಸೇರಿಕೊಂಡಳು ಮೀರಾ ತುಂಬಾ ಸಂತೋಷಗೊಂಡಿದ್ದಾಳೆ ದೇವೇಂದ್ರ ಕುಡಿಯೋದನ್ನು ಬಿಟ್ಟೆ ಅನ್ನೋ ಆ ಶಬ್ದ ಮೀರಾಳ ಕಿವಿಯಲ್ಲಿ ಸಂಗಿತದಂತೆ ಭಾಸವಾಗುತ್ತಿದೆ ಗಂಡ ಮಕ್ಕಳು ತಾನು ವ್ಹೌ ಎಂತಹ ಸುಂದರ ದೃಶ್ಯ ಕುಣಿದಾಡಬೇಕು ಅನ್ನಿಸುತ್ತಿದೆ ಮನದಲ್ಲೇ ದೇವರ ಹೆಸರು ಹೇಳುತ್ತಾ ಗಂಡನಿಗೆ ಇಷ್ಟವಾದ ಚಿಕನ್ ಮಸಾಲಾ ಮಾಡುತ್ತಿದ್ದಾಳೆ ನಿಮಿಷ ನಿಮಿಷಕ್ಕೂ ಅವಳ ಕಣ್ಣುಗಳು ಬಾಗಿಲಿನತ್ತ ಹೋಗುತ್ತಿದೆ ರಾತ್ರಿಯಾಗಲು ಆಯಿತು ಗಂಡ ಇನ್ನೂ ಮನೆಗೆ ಬರಲಿಲ್ಲ ಅಂತ ಚಿಂತೆ ಮತ್ತೇನಾದರೂ ಕೊಟ್ಟ ಮಾತು ತಪ್ಪಿ ಕುದಿದುಬಿಡುತ್ತಾರೆ ಅನ್ನೋ ಹೆದರಿಕೆಯಿದ್ದರೂ ಇವತ್ತು ದೇವೇಂದ್ರನ ಧ್ವನಿಯಲ್ಲಿದ್ದ ಆ ಸ್ಪಷ್ಟತೆ ಅವರ ಮಾತನ್ನು ನಂಬುವಂತೆ ಮಾಡಿತು ಅಡುಗೆ ಕಾರ್ಯ ಮುಗಿಸಿ ಮತ್ತೆ ಮಗನ ಬಳಿಯಲ್ಲಿ ಬಂದು ಕುಳಿತುಕೊಂಡು ಕತೆ ಹೇಳಲು ಆರಂಬ ಮಾಡಿದಳು ಪತ್ರಿಕೆ ಪ್ರಕಟ ಕಾರ್ಯ ಮುಗಿಸಿಕೊಂಡ ದೇವೇಂದ್ರ ಒಮ್ಮೆ ಕಾಳಿಂಗ ನಾಗನನ್ನು ಕೈಲಿ ಹಿಡಿದು ಉದ್ಗರಿಸಿದ “ಒಂದು ಹನಿ ಮಸಿ ಕೋಟಿ ಜನಕ್ಕೆ ಬಿಸಿ “ಹಃ ಹಃ ಹಃ ಗಹಗಹಿಸಿ ನಗುತ್ತಾ.. ನಾಳೆಯಿಂದ ಗದಗ ಜಿಲ್ಲೆಯಲ್ಲೊಂದು ಹೊಸ ಇತಿಹಾಸದ ಆರಂಬ ಕರ್ನಾಟಕದ ದುಷ್ಟರ ಪಾಲಿಗೆ ಕಾಳಿಂಗ ನಾಗ. ಬಾತ್ಮಿದಾರರು ಹಂಚಿಕೆದಾರರು ಮುದ್ರಣಕಾರರು ಯಲ್ಲರನ್ನು ಸೇರಿಸಿಕೊಂಡು ಕೆಲವು ಯಚ್ಚರಿಕೆಯನ್ನು ಕೊಟ್ಟು ಪತ್ರಿಕೆಯ ಮರು ಮುದ್ರಣ ಮಾಡಬೇಕು ಅಂತ ಅನ್ನಿಸಿದರೆ ನನ್ನ ಅಪ್ಪಣೆಗಾಗಿ ಕಾಯದೇ ಮುದ್ರಿಸಿ ಹಂಚಿರಿ ಎಂದು ತಾಕಿತು ಮಾಡಿದ ಬಾತ್ಮಿದಾರರು ಮಾಡಬೇಕಾದ ಕಾರ್ಯಗಳ ಕುರಿತು ಸ್ವಲ್ಪ ಸಮಾಲೋಚಿಸಿದ ನಂತರ ಪತ್ರಿಕೆಯನ್ನು ಹಂಚಿಕೆಗಾಗಿ ಹಸ್ತಾಂತರಿಸಿ ಮತ್ತೊಂದು ಸಿಗರೇಟನ್ನು ತುಟಿಗಂಟಿಸಿ ದಂ ಎಳೆದು ಸುರುಳಿ ಸುರುಳಿಯಾಗಿ ಹೋಗೆ ಬಿಟ್ಟ ದೇವೇಂದ್ರನ ಬಾಯಿಂದ ಸುರುಳಿಯಾಗಿ ಹೋಗುತ್ತಿರುವ ಹೋಗೆ ರೂಂ ತುಂಬಾ ತುಂಬಿಕೊಂಡಿತು ಹೀಗೆ ಆಲೋಚನೆಯಲ್ಲಿ ಮುಳುಗಿಹೋಗಿದ್ದ ದೇವೇಂದ್ರ ತಟ್ಟನೆ ಯಚ್ಚರಗೊಂಡ. ವೆಂಕಟೇಶ್ ನಿನ್ನೆಯಿಂದ ಜ್ವರದಿಂದ ಬಳಲುತ್ತಿದ್ದಾನೆ ಈಗ ಹೇಗಿದ್ದಾನೋ ಮನೆಯ ನೆನಪಾಗಿ ಮಲೆದ್ದು ಮತ್ತೊಂದು ಸಿಗರೆಟ್ ಅಂಟಿಸಿ ಬಿರಬಿರನೆ ಹೆಜ್ಜೆ ಹಾಕಿದ.

ಮುಂದಿನ ಸಂಚಿಕೆಯಲ್ಲಿ

Friday, May 25, 2018

ಇಂದು "ರೂಪವತಿ" ಗೆ ಬಿಡುವು ಕೊಡುವಿರಾ?

ಕ್ಷಮಿಸಿ ಗೆಳೆಯರೆ

ಇವತ್ತು ಬೆಜಾರಾಗಿದೆ ಟೈಪ್ ಮಾಡೊಕೆ ಮೂಡ್ ಇಲ್ಲ 
ಆ ಕಾರಣ ಇವತ್ತು "ರೂಪವತಿ" ಗೆ ಬಿಡುವು ಕೊಡ್ತಿರಿ ಅಂದುಕೊಂಡಿದ್ದೆನೆ 
ನಾಳೆಯಿಂದ ಎಂದಿನಂತೆ "ರೂಪವತಿ" ನಿಮ್ಮ‌ಮಡಿಲಿಗೆ ಬರುತ್ತಾಳೆ 

ರಾ ದೇ ಕಾರಭಾರಿ
9663082890 

Thursday, May 24, 2018

ಅತಿ ಬೇಗನೆ ಬರುತ್ತಿದ್ದಾಳೆ ಕಥಾನಾಯಕನ ಜೀವನದಲ್ಲಿ ರೂಪವತಿ ತಪ್ಪದೆ ಓದಿ "ರೂಪವತಿ"

ಅತಿ ಬೇಗನೆ ಬರುತ್ತಿದ್ದಾಳೆ ಕಥಾನಾಯಕನ ಜೀವನದಲ್ಲಿ ರೂಪವತಿ 
ತಪ್ಪದೆ ಓದಿ 

"ರೂಪವತಿ"

ರೂಪವತಿ : ಸಂಚಿಕೆ - 5

ಮೈ ನಡುಗುತ್ತಾ ಇದೆ ತುಂಬಾ ಚಳಿ ಅನ್ನಿಸ್ತಾ ಇದೆ ತುಂಬಾ ಜ್ವರ ಇದೆ ವೆಂಕಟೇಶಗೆ ಕತ್ತಲಲ್ಲಿ ಭಯನಕ ದೃಶ್ಯಗಳ ಮದ್ಯ ರಾತ್ರಿ ಕಳೆದ ಕಾರಣ ಸಂಪೂರ್ಣ ಕುಗ್ಗಿಹೊಗಿದ್ದಾನೆ ಅಮ್ಮನ ತೊಡೆ ಮೇಲೆ ಮಲಗಿ ಅಳುತ್ತ ಇದ್ದಾನೆ ಮಗನ ಸ್ತಿತಿ ನೋಡಿ ಮೀರಾ ಅಳುತ್ತಾ ದೇವರಿಗೆ ಬೈತಾ ಇದ್ದಾಳೆ ಇದನ್ನೆಲ್ಲಾ ಗಮನಿಸುತ್ತ ಕೈಲಿ ಸಿಗರೆಟ್ ಹಚ್ಚಿಕೊಂಡು ದಂ ಎಳೆಯುತ್ತ ಕುಳಿತಿದ್ದ ದೇವೇಂದ್ರ ಬಿರಬಿರನೆ ಬಚ್ಚಲು ಮನೆಗೆ ಹೋದ ದೇವೇಂದ್ರ ಬಿರಬಿರನೆ ಯದ್ದು ಸರಸರನೆ ಬಾತ್ ರೂಂ ಗೆ ಯಾಕೆ ಹೋದ ಅನ್ನೋದನ್ನು ತಿಳಿಯದೆ ಮತ್ತೆ ಮೀರಾ ಮತ್ತು ಮಕ್ಕಳು ಕಂಗಾಲಾದರು ಯಾಕೆಂದ್ರೆ ಬಾತ್ ರೂಂ ನಲ್ಲಿ ದೇವೇಂದ್ರ ಒಂದು ಬೆತ್ತವನ್ನು ಬಚ್ಚಿ ಇಡುತ್ತಾ ಇದ್ದ ಬಡಿಯೋಕೆ ಅಂತ ವೆಂಕಟೇಶ್ ತತ್ತರಿಸಿಹೋಗಿದ್ದ ಮೊದಲೇ ಜ್ವರದಿಂದ ಬಳಲುತ್ತಿದ್ದ ವೆಂಕಟೇಶ್ ಮತ್ತಷ್ಟು ಬಳಲಿಹೋದ ಮೀರಾ ಭಯದಿಂದ ಕಂಗಾಲಾದಳು ತಂಗಿ ಅಳುತ್ತ ಅಡುಗೆ ಮನೆಗೆ ಓಡಿ ಹೋಗಿ ಅವಿತುಕೊಂಡಳು ತಮ್ಮ ಇದರ ಯಾವುದೇ ಅರಿವು ಇಲ್ಲದೆ ತನ್ನ ಪಾಡಿಗೆ ತಾನು ಆಟ ಆಡುತ್ತ ಇದ್ದ.
ಬಾತ್ ರೂಂ ಬಾಗಿಲು ತೆರೆದುಕೊಂಡಿತು ಹೊರಗೆ ಬಂದ ದೇವೇಂದ್ರ ನೇರ ದೇವರ ಮನೆಗೆ ಹೋಗಿ ಪೂಜೆ ಮಾಡಿದ ಬಳಿಕ ಮೀರಾಳ ಹತ್ತಿರ ಬಂದು ಇವತ್ತಿನಿಂದ ನಾನು ಯಾವತ್ತೂ ಕುಡಿಯೋಲ್ಲ ಎಂದು ಭಾಷೆ ಕೊಟ್ಟು ವೆಂಕಟೇಶನ ಮುದ್ದಾಡಿ ಆಸ್ಪತ್ರೆಗೆ ಕರೆದುಕೊಂಡು ಹೊರಟ.
ಮೀರಾ ತುಂಬಾ ಸಂತೋಷಗೊಂಡಿದ್ದಳು ಗಂಡ ಕುಡಿಯೋದನ್ನು ಬಿಡುತ್ತೇನೆ ಅಂತ ಖಡಾಖಂಡಿತವಾಗಿ ಹೇಳಿದ್ದ ಇದೆ ಮೊದಲ ಬಾರಿ ಸ್ನಾನ ಮಾಡಿಕೊಂಡು ಪೂಜೆ ಮಾಡಿಕೊಂಡು ಬಂದು ಮೀರಾಳ ಜೊತೆ ಪ್ರೀತಿಯಿಂದ ಮಾತಾಡಿದ್ದು ತಂಗಿ ಕೂಡ ಸಂತೋಷಗೊಂಡಳು ಆಸ್ಪತ್ರೆಗೆ ಹೋದ ದೇವೇಂದ್ರ ವೆಂಕಟೇಶನಿಗೆ ಟ್ರೀಟ್ ಮಾಡಿಸಿಕೊಂಡು ಮೊದಲ ಬಾರಿ ಮಗನನ್ನು ಸಿನೆಮಾಗೆ ಕರೆದುಕೊಂಡು ಹೋದ ಹಿಂದಿ ಸಿನೆಮಾ “ಶೋಲೆ” ವೆಂಕಟೇಶ್ ಮೊದಲ ಬಾರಿ ನೋಡಿದ ಚಿತ್ರ ಸಿನೆಮಾ ಮುಗಿಸಿ ಸಂತೆ ಮಾಡಿಸಿಕೊಂಡು ಸಿಹಿ ತಿನಿಸುಗಳನ್ನು ಕೊಡಿಸಿಕೊಂಡು ಸಂಜೆ ಮನೆಗೆ ಕರೆದುಕೊಂಡು ಬಂದ
ವೆಂಕಟೇಶ್ ನಿಗೆ ಇನ್ನು ಸಂಪೂರ್ಣ ಜ್ವರ ಕಡಿಮೆಯಾಗಿರಲಿಲ್ಲ ಬಂದು ವೆಂಕಟೇಶ್ ಮಲಗಿಕೊಂಡ ಮೀರಾ ಖುಷಿಯಾಗಿದ್ದಳು ಮನೆಯಲ್ಲಿ ಹಬ್ಬದ ವಾತಾವರಣ ಒಳ್ಳೆ ಅಡುಗೆ ಮಾಡಿ ರಾತ್ರಿ ಉಟ ಮಾಡಿ ಮಗಗಿದರು ದೇವೇಂದ್ರ ಸಂಪೂರ್ಣ ದಿನ ಕುಡಿಯದೇ ಇದ್ದಿದ್ದು ವಿಶೇಷವೇ ಆಗಿತ್ತು ಮರುದಿನ ಬೆಳಿಗ್ಗೆ ಮೀರಾಳ ಜೊತೆ ಮಾತಿಗಿಳಿದ ಪತ್ರಿಕೆ ಎರಡು ತಿಂಗಳಿನಿಂದ ಪ್ರಿಂಟ್ ಮಾಡಿಲ್ಲ ಹಿಗೆಆದರೆ ಮುಂದೆ ಪತ್ರಿಕೆಗೆ ಬೆಲೆ ಇಲ್ಲದ ಹಾಗೆ ಆಗಿಬಿಡುತ್ತೆ ಮತ್ತೆ ಪತ್ರಿಕೆ ಆರಂಬ ಮಾಡಬೇಕು ಶಾಸಕರೊಬ್ಬರ ಹಾಟ್ ನ್ಯೂಸ್ ಒಂದು ಸಿಗಲಿಕ್ಕಿದೆ ತನಿಖೆ ಮಾಡಬೇಕು ಮೂರು ತಿಂಗಳು ಜನ ಪತ್ರಿಕೆ ಓದಲಿಲ್ಲ ಈ ಬಾರಿ ಶಾಸಕರ ವರದಿ ಹಾಕಿದ್ರೆ ಇಡಿ ಕರ್ನಾಟಕದಲ್ಲಿ ಪತ್ರಿಕೆ ಪ್ರಸಿದ್ದವಾಗುತ್ತೆ ಇವತ್ತು ಹೋಗಿ ವರದಿ ಕಲೆಹಾಕಿಕೊಂಡು ಬರುವೆ ನಾಳೆಯಿಂದ ಪತ್ರಿಕೆ ಪ್ರಕಟಮಾಡುವ ಕಾರ್ಯ ಮಾಡಬೇಕು ಅನ್ನುತ್ತ ಒಂದು ಸಿಗರೇಟಿಗೆ ಬೆಂಕಿ ತಗುಲಿಸಿ ದಂ ಎಳೆದು ರಿಲ್ಯಾಕ್ಸ್ ಆದ ದೇವೇಂದ್ರ ದೇವೇಂದ್ರನ ತಲೆಯಲ್ಲಿ ಶಾಸಕನ ಆ ವಿಷಯವೇ ಓಡಾಡುತ್ತಿತ್ತು ಮಿಂಚಿನ ಸುದ್ದಿ ನಗರದ ಯಾವ ಪತ್ರಿಕೆಗಳು ಆ ಶಾಸಕರ ವಿರುದ್ದ ವರದಿ ಹಾಕಲಿಕ್ಕೆ ಹೆದರುತ್ತಾ ಇದ್ದರು ಜನರ ಕಣ್ಣಿಗೆ ಕಾಣದೆ ಇರುವ ಶಾಸಕನ ವಿಷಯವನ್ನು ಸಾಕ್ಷಿ ಸಮೇತ ಜನರ ಮುಂದೆ ತರಬೇಕು ‘ಕಾಳಿಂಗ ನಾಗ” ಪತ್ರಿಕೆಯೆಂದರೆ ಸಾಕು ರಾಜಕೀಯ ನಾಯಕರ ಮತ್ತು ಭ್ರಷ್ಟ ಅದಿಕಾರಿಗಳು ನಡುಗಬೇಕು ನಗರವನ್ನೇ ನಡುಗಿಸಿಬಿಡುವ ಆ ಶಾಸಕನ ವಿಷಯ ಕಾಳಿಂಗ ನಾಗ ಪತ್ರಿಕೆಯಲ್ಲಿ ಪ್ರಕಟವಾದರೆ.... ವ್ಹೌ ಸುಪರ್ ಹೀಗೆ ಆಲೋಚನೆ ಮಾಡುತ್ತಾ ಪೆನ್ನು ಮತ್ತು ಪೇಪರ್ ಹಿಡಿದು ಕುಳಿತ ದೇವೇಂದ್ರ ಬರೆಯೋಕೆ ಆರಂಬ ಮಾಡಿದ ಟೇಬಲ್ ಮೇಲಿನ ಪೇಪರಗಳು (ಹಾಳೆಗಳು) ವರದಿಗಳಿಂದ ತುಂಬುತ್ತಾ ಇದ್ದವು ಜೊತೆಗೆ Ash Tray ಸಹ ಎಷ್ಟು ಸಿಗರೇಟು ಸೇದಿದ್ದರೋ ಲೆಕ್ಕವೇ ಇಲ್ಲ ಮನೆ ತುಂಬಾ ಹೋಗೆ ಹೋಗೆ ಹೋಗೆ ಸಿಗರೇಟಿನ ಘಾಟು ಮನೆ ತುಂಬಾ ತುಂಬಿಕೊಂಡಿತ್ತು ಸ್ವಲ್ಪ ಹೊರಗೆ ಸುತ್ತಾಡಿ ಮತ್ತೆ ಮನೆಗೆ ಬಂದು ಬರೆಯೋಕೆ ಕುಳಿತುಕೊಂಡ ದೇವೇಂದ್ರ. ಸಂಪೂರ್ಣ ರಾತ್ರಿ ದೇವೇಂದ್ರ ಯಚ್ಚರವಾಗೆ ಇದ್ದ ಬೆಳಕು ಆಗಿದ್ದೆ ಗೊತ್ತಾಗಲಿಲ್ಲ ಬಾತ್ಮಿದಾರರಿಗೆ ಸಂದಿಸಿ ಪತ್ರಿಕೆ ಪ್ರಕಟಣೆ ಮತ್ತು ಹಂಚಿಕೆ ಕುರಿತು ಮಾತುಕತೆ ಮುಗಿಸಿ ವರದಿಗಾಗಿ ಬೇಕಾಗುವ ಕೆಲ ಭಾವಚಿತ್ರಗಳ ಶೂಟ್ ಮಾಡಲು ಹೆಗಲಿಗೆ ಒಂದು ಬ್ಯಾಗ್ ಹಾಕಿಕೊಂಡು ಕೈಲಿ ಕ್ಯಾಮೆರಾ ನೇತಾಡಿಸಿಕೊಂಡು ಬಾತ್ಮಿದಾರರ ಜೊತೆ ಹೊರಡಲನುವಾದ.......

ಮುಂದಿನ 

Wednesday, May 23, 2018

ರೂಪವತಿ ಓದುಗರಿಗೊಂದು ಸೂಚನೆ 1

ರೂಪವತಿ

ಇದು ಮತಾಂತರವೆಂಬ ಭೂತಕ್ಕೆ ಬಲಿಯಾದವನ ವಿಚಿತ್ರ ಪ್ರೇಮಕತೆ
ಹೆಣ್ಣುಗಳನ್ನು ಮುಂದೆಬಿಟ್ಟು ಕ್ರೈಸ್ತರು ಹೇಗೆ ಮತಾಂತರ ಮಾಡುತ್ತಾರೆ
ಆ ಹೆಣ್ಣು ಒಂದು ಮಗುವಾದ ಮೇಲೆ ಹೆಗೆ ಗಂಡನ ಮೆಲೆ ಶಿಲುಬೆಯನ್ನು ಹೇರುತ್ತಾಳೆ
ಕ್ರೈಸ್ತ ಸೇವಕರು ನಿಜವಾಗಿಯೂ ಎನು ಮಾಡುತ್ತಾರೆ
ಅಲ್ಲಿ ನಡೆಯುವ ಅವ್ಯವಹಾರಗಳೇನು
ಹಿಂದುತ್ವಕ್ಕೆ ಮರಳಿ ಬಂದ ಕತಾನಾಯಕ ಮುಂದೆನಾಗುತ್ತಾನೆ
ಇದೆಲ್ಲದರ ಮದ್ಯ ರೂಪವತಿ ಯಾರು

ಎಂಬ ವಿಷಯದ ಮೆಲಿನ ಕತಾಹಂದರವೇ "ರೂಪವತಿ"
ಈ ಧಾರಾವಾಹಿಯನ್ನು ಚಲನಚಿತ್ರವಾಗಿ ನಿರ್ಮಿಸಲಾಗುತ್ತದೆ
ಉತ್ಸಾಹಿಗಳು ನಮ್ಮೊಂದಿಗೆ ಕೈಜೊಡಿಸಬೇಕು
ಮತಾಂತರದ ನೈಜ ಮರ್ಮದ ಅನಾವರಣಕ್ಕೆ ನಿಮ್ಮ ಸಹಕಾರ ಬೇಕು

ಈ ಧಾರಾವಾಹಿಯನ್ನು ಓದಲು ನಿಮ್ಮ ಗೆಳೆಯರನ್ನು ಗ್ರೂಪಗೆ ಸೆರಿಸಿ
ನಮ್ಮ ಮುಂದಿನ ನಡೆಗೆ ಮುನ್ನುಡಿತಾಗಿ ಅಂತ ಭಿನ್ನವಿಸಿಕೊಳ್ಳುತ್ತೆನೆ

ರಾ ದೇ ಕಾರಭಾರಿ

ರೂಪವತಿ : ಸಂಚಿಕೆ 4

ಶಾಲೆಯಿಂದ ಬಂದ ವೆಂಕಟೇಶ್ ಏನು ಆಗುತ್ತಿದೆ ಅಂತ ಅರಿಯೋ ಮೊದಲೇ ಹೊಡೆತಗಳ ಮೇಲೆ ಹೊಡೆತ ಬಿಳೋಕೆ ಆರಂಬವಾಯಿತು ಶಾಲೆಯಿಂದ ಅರ್ದ ಘಂಟೆ ತಡವಾಗಿ ಬಂದಿದ್ದು ಈ ಅವಾಂತರಕ್ಕೆ ಕಾರಣ ಬಿಡಿಸಲು ಬಂದ ಮೀರಾ ಕೂಡ ಹೊಡೆತಕ್ಕೆ ಬಲಿಯಾದಳು ತಂಗಿ ಪ್ರೇಮ ಒಂದು ಮೂಲೆಯಲ್ಲಿ ಅಡಗಿ ಕುಳಿತುಕೊಂಡಿದ್ದಳು ಅವಳು ಅಳುವ ಶಬ್ದ ಕೂಡ ಹೊರಗೆ ಬರುತ್ತಿಲ್ಲ ಭೀಕರ ಘಟನೆ ನೋಡನೋಡುವಷ್ಟರಲ್ಲಿ ಯಲ್ಲರ ಮೈಮೇಲೆ ಬಾಸುಂಡೆಗಳು ಶಾಂತವಾಯಿತು ಮನೆ ಒಳಗೊಳಗೇ ಅಳುತ್ತಿರುವ ಮೀರಾ ಮತ್ತು ಮಕ್ಕಳು ಅಳುವ ಸದ್ದು ಹೊರಬಂದರೆ ಯಲ್ಲಿ ಮತ್ತೆ ಹೊಡೆತ ಬಿಳುತ್ತೆ ಎಂಬ ಹೆದರಿಕೆ ಆ ಸದ್ದನ್ನು ಮುಳುಗಿಸಿಬಿತ್ತಿತ್ತು ರಾತ್ರಿ ಕಳೆದು ಬೆಳಕಾಯಿತು ನಿನ್ನೆ ಬರುವಾಗ ಮಕ್ಕಳಿಗಾಗಿ ದೇವೇಂದ್ರ ತಂದ ತಿನಿಸುಗಳು ನಶೆಯಲ್ಲಿ ನೆನಪಾಗದೆ ಬ್ಯಾಗ್ ನಲ್ಲಿ ಹಾಗೆ ಇದ್ದವು ಬೆಳಿಗ್ಗೆ ಯದ್ದ ದೇವೇಂದ್ರ ಮಕ್ಕಳನ್ನು ತಬ್ಬಿಕೊಂಡು ಮುದ್ದುಮಾಡಿ ತಂದ ಮಿಟಾಯಿಗಳನ್ನು ಹಂಚಿದ ಮರುದಿನ ರವಿವಾರ ಶಾಲೆಗೆ ರಜೆ ದೇವೇಂದ್ರ ವೆಂಕಟೇಶ್ ನನ್ನು ಕರೆದುಕೊಂಡು ಬೆಳಿಗ್ಗೆನೆ ಪಕ್ಕದುರು ಬೆಳಧಡಿ ಗ್ರಾಮಕ್ಕೆ ತಮ್ಮ ಪ್ರಿತ್ರಾಜಿತ ಆಸ್ತಿ ನೋಡಲು ಕರೆದುಕೊಂಡು ಹೋದ ರಸ್ತೆಗುಂಟ ಕುಡಿಯುತ್ತ ಸಾಗಿತು ದೇವೇಂದ್ರನ ರತಯಾತ್ರೆ ಗದ್ದೆ ತಲುಪುವ ವೇಳೆಗೆ ಸಿಕ್ಕಾಪಟ್ಟೆ ನಷೆಯೇರಿತ್ತು ಬೀಸುವ ಗಾಳಿಯ ರಬಸಕ್ಕೆ ನಶೆ ಮತ್ತಷ್ಟು ಜೋರಾಯಿತು ಸಂಜೆಯಾಗಲು ಬಂತು ಅಪ್ಪ ರಾತ್ರಿಯಾಗುತ್ತೆ ಬಾಪಾ ಮನೆಗೆ ಹೋಗೋನು ಅಂತ ಹೇಳಿದ ತಪ್ಪಿಗೆ ಗದ್ದೆಯಲ್ಲಿ ಸಿಕ್ಕಾಪಟ್ಟೆ ಒದೆ ತಿಂದ ವೆಂಕಟೇಶ್ ಮತ್ತೆ ಹೊಡೆತ ಬಿಳುತ್ತೆ ಅನ್ನೋ ಹೆದರಿಕೆಯಲ್ಲಿ ಮರೆಯಾಗಿ ಅಡಗಿಕೊಂಡ ಸ್ವಲ್ಪ ಚಿರಾಡಿದ ದೇವೇಂದ್ರ ಹಾಗೆ ನಶೆಯಲ್ಲಿ ಮಲಗಿಬಿಟ್ಟ ಸಂಜೆ ಹೋಗಿ ರಾತ್ರಿಯಾಯಿತು ಸುತ್ತಲೂ ಎಷ್ಟು ದೂರ ಕಣ್ಣು ಹಾಯಿಸಿದರೂ ಒಂದೇ ಒಂದು ನರಪಿಳ್ಳೆಯೂ ಕಾಣಿಸಿಗುವುದಿಲ್ಲ ದೂರದೂರಕ್ಕೋ ಕತ್ತಲೆ ಯಲ್ಲಿಯಾದರೂ ಒಂದು ಬೆಳಕು ಕಂಡಿತು ಎಂದು ಹೆದರಿಕೆಯಲ್ಲೇ ಕಣ್ಣು ಹಾಯಿಸಿದ ವೆಂಕಟೇಶ್ ನಿಗೆ ಕಂಡಿದ್ದು ಬರಿ ಕತ್ತಲೋ ಕತ್ತಲು ಆ ನಿರ್ಜನ ಪ್ರದೇಶದ ಗದ್ದೆಯಲ್ಲಿ ನಾಲ್ಕನೇ ತರಗತಿಗೆ ಹೋಗುವ ವೆಂಕಟೇಶ್ ದಿಕ್ಕು ಇಲ್ಲದಂತವನಾದ ದೇವೇಂದ್ರನಿಗೆ ಇದರ ಪರಿವೇ ಇಲ್ಲ ಕುಡಿತದ ನಶೆ ಯಾವ ಯಚ್ಚರವು ಇರದಂತೆ ಮಾಡಿದೆ. ಕತ್ತಲಲ್ಲಿ ಸುತ್ತಲು ನೋಡುತ್ತಾ ಬಂದು ಅಪ್ಪನ ಪಕ್ಕದಲ್ಲಿ ಕುಳಿತುಕೊಂಡು ಕಣ್ಣು ಮಿಟುಕಿಸದೆ ಸುತ್ತಲು ನೋಡುತ್ತಾ ಕುಳಿತುಬಿಟ್ಟ ಚಿತ್ರ ವಿಚಿತ್ರ ಶಬ್ದಗಳು ನಾಯಿಗಳ ಗೋಳಾಟ ಗದ್ದೆಯ ಪಕ್ಕದಲ್ಲಿಯೇ ನಿರು ಹಾದುಹೋಗುವ ಕಾರಣ ಕಪ್ಪೆಗಳ ಕಲರವದ ಜೊತೆ ವಿಚಿತ್ರ ಶಬ್ದ ಆಗಾಗ ಕಿವಿಯಲ್ಲಿ ಹಾದು ಹೋದಂತೆ ಭಾಸವಾಗುವ ಹುಳುಗಳು ಕತ್ತಲೆ ಆಕಾಶದಲ್ಲಿ ಅಲ್ಲಿ ಇಲ್ಲಿ ಕಾಣುವ ಮಿಂಚು ಹುಳುವಿನ ಹೊಳಪು ತಣ್ಣನೆ ಬೀಸುವ ಗಾಳಿಯ ರಬಸಕ್ಕೆ ತತ್ತರಿಸಿ ಹೋದ ಆ ಎಳೆಯ ಜೀವ ಚಳಿ ತಾಳದೆ ಮುದುರಿಕೊಂಡು ಕುಳಿತು ಅಳುತ್ತಿರುವ ಆ ಭಯಾನಕ ದೃಷ್ಯ ಇದನ್ನೆಲ್ಲಾ ನೋಡಲು ಭಹುಷ್ಯ ಆ ದಿನ ಆ ದೇವರು ಕೂಡ ರಜೆ ತಗೊಂಡಂತೆ ತೋರಿತು ರಾತ್ರಿ ತುಂಬಾ ದೊಡ್ಡದಂತೆ ಕಂಡಿತು ಬೆಳಕೇ ಆಗುತ್ತಾ ಇಲ್ಲ ಇಡಿ ರಾತ್ರಿ ಸೋಲ್ಪವು ಕಣ್ಣು ಮಿಟುಕಿಸದೇಸುತ್ತಲು ದಿಟ್ಟಿಸುತ್ತ ಇದ್ದ ವೆಂಕಟೇಶ್ ಯಾವಾಗ ಕಣ್ಣು ಮುಚ್ಚಿದನೋ ಗೊತ್ತಾಗಲಿಲ್ಲ ನಿದ್ದೆಗೆ ಹೋಗಿದ್ದ ವೆಂಕಟೇಶ್ ತಟ್ಟನೆ ಯಚ್ಚರವಾಗಿ ಕಣ್ಣು ತೆರೆದು ನೋಡಿದ ಮುಂದೆ ಒಂದು ದೊಡ್ಡ ಬಿಳಿಯಾಕಾರ ನಿಂತಿರುವಂತೆ ಕಂಡು ಅಮ್ಮ ಅಂತ ಕಿಟಾರನೆ ಕಿರುಚಿಕೊಂಡು ಅಳಲು ಆರಂಬಿಸಿದ,, ಮಗ ಏನಾಯ್ತು ಏನಾಯ್ತು ಎನ್ನುತ್ತಾ ಮಗನ ಹತ್ತಿರ ಬಂದ ದೇವೇಂದ್ರ ಮಗನನ್ನು ತಬ್ಬಿಕೊಂಡು ಸಮಾಧಾನಗೊಲಿಸಿದ ಬೆಳಿಗ್ಗೆ ಯಚ್ಚರವಾಗಿ ಯದ್ದು ಬಹಿರ್ದಷೆಗೆ ಹೋಗಿ ಬರುತ್ತಾ ಇರುವ ಅದೇ ಸಮಯದಲ್ಲಿ ವೆಂಕಟೇಶ್ ಯಚ್ಚರಗೊಂಡು ಕಣ್ಣು ತೆರೆದ ತಕ್ಷಣ ಯಾವುದೋ ಆಕಾರ ಬರುತ್ತಿರುವಂತೆ ಭಾಸವಾಗಿ ಕಿಟಾರನೆ ಕಿರುಚಿಕೊಂಡಿದ್ದ ಮಗನನ್ನು ಸಮಾಧಾನಗೊಲಿಸಿದ ದೇವೇಂದ್ರ ಮಗನನ್ನು ಕರೆದುಕೊಂಡು ಸರಸರನೆ ಊರಿನತ್ತ ಹೆಜ್ಜೆ ಹಾಕಿದ ಊರು ತಲುಪುವ ಹೊತ್ತಿಗೆ ಆಕಾಶದಲ್ಲಿ ಸೂರ್ಯ ಹೊಳೆಯುತ್ತಿದ್ದ. ಗ್ರಾಮದ ಬಸ್ ನಿಲ್ದಾಣದಲ್ಲಿ ಅದಾಗಲೇ ಬೆಟಗೇರಿ ಗ್ರಾಮಕ್ಕೆ ಹೋಗುವ ಬಸ್ಸು ಸಿದ್ದವಾಗಿತ್ತು.

ಮುಂದಿನ ಸಂಚಿಕೆಯಲ್ಲಿ 

Tuesday, May 22, 2018

ರೂಪವತಿ - ಸಂಚಿಕೆ 3

ಲೇ ......... ಇವಳು ನನ್ನ ಹೆಂಡತಿ ಉಮಾ, ಲೇ ಮಕ್ಳ ಇವಳು ನಿಮ್ಮ ಅವ್ವ್ ಇವತ್ತಿಂದ ಇಲ್ಲೇ ಇರುತ್ತಾಳೆ (ಕುಡಿತದ ಮತ್ತಿನಲ್ಲಿ ದೇವೇಂದ್ರನ ಅರ್ಭಟ, ಮೀರಾ ಮಾತನಾಡುವ ಸ್ತಿತಿಯಲ್ಲಿ ಇಲ್ಲ ಮಾತಾನಾಡಲು ಆಗೋಲ್ಲ ಕೂಡ ದೇವೇಂದ್ರ ಒಬ್ಬ ರಾಕ್ಷಸ ಒಂದೇ ಒಂದು ಮಾತಾಡಿದರೂ ಸಾಯೋಹಾಗೆ ಹೊಡೆಯೋಕೆ ಸುರು ಮಾಡುತ್ತಾನೆ, ವಿಧಿಯಾಟ ಅಂತ ಮೀರಾ ಸುಮ್ಮನಾದಳು ಗಂಡ ಬೇರೆ ಹೆಂಗಸನ್ನು ಮಧುವೆಯಾದ ವಿರೋಧ ಮಾಡಬೇಕು ಎಂಬ ಭಾವನೆ ಇದ್ದರೂ ಭಯ ಭಯ ಭಯ ಉಮಾ ಮನೆಯಲ್ಲೇ ಇರಲು ಆರಂಬ ಮಾಡಿದಳು ತುಂಬು ಗರ್ಬಿಣಿ ಮೀರಾ ಚಿಂತೆಯಲ್ಲೇ ದಿನ ದೂಡಲು ಆರಂಬ ಮಾಡಿದಳು ಉಮಾ ಮತ್ತು ದೇವೇಂದ್ರನ ಮದ್ಯ ತುಂಬಾ ಹೊಂದಾಣಿಕೆ ಇತ್ತು ಇಬ್ಬರೂ ಸಾರಾಯಿಯ ದಾಸರು ರಾಣೆ ಬೆನ್ನೋರಿನ ಸ್ಲಂ ಹೆಂಗಸು ಅವಳು ಮೊದಲೇ ಎರಡು ಮಧುವೆಯಾಗಿ ಬಿಡುಗಡೆ ಗೊಂದು ಈಗ ದೇವೇಂದ್ರನ ತೆಕ್ಕೆಯಲ್ಲಿ ಬಂದಿದ್ದಳು ದೇವೇಂದ್ರ ಅವಳ ಸಂಗ ಬಯಸಿ ಅವಳಲ್ಲೇ ಮಗ್ನನಾದ ಪ್ರತಿದಿನ ಇಬ್ಬರು ಹಕ್ಕಿಗಳಂತೆ ಹಾರಾಡ ಹತ್ತಿದರು ದಿನಗಳು ಉರುಳಹತ್ತಿದವು ದಿನಗಳೆದಂತೆ ದೇವೇಂದ್ರ ಉಮಾಳ ಸಂಗ ಬಯಸಿದ ಆದರೆ ಉಮಾ ವಾಪಸ್ಸು ಊರಿಗೆ ಹೋಗುತ್ತೇನೆ ನಾ ಬೇಕಾದ್ರೆ ನೀವು ಅಲ್ಲೇ ಬಂದು ಇರಿ ಅಂತ ರಾಗ ಹಾಕಲು ಸುರು ಮಾಡಿದಳು ಅವಳ ಪ್ರೇಮ ಪಾಶಕ್ಕೆ ಬಿದ್ದ ದೇವೇಂದ್ರ ಇನ್ನು ಹೆಚ್ಚು ಕುಡಿಯೋಕೆ ಮನೇಲಿ ಹಿಂಸೆ ಕೊಡೋಕೆ ಆರಂಬಮಾಡಿದ ಒಂದು ದಿನ ಸಂಜೆ ಮನೆಗೆ ಬಂದ ದೇವೇಂದ್ರನ ಕಾಣಿಗೆ ಉಮಾ ಕಾಣಿಸಲಿಲ್ಲ ಮೀರಾ ಉಮಾಳನ್ನು ಮನೆಯಿಂದ ಓಡಿಸಿದ್ದಾಳೆ ಅಂತ ಸಬೂಬು ತೆಗೆದು ಮನೆಯಿಂದ ಆಚೆ ನಡೆದುಬಿಟ್ಟ ದಿನಗಳು ಉರುಳುತ್ತಾ ಹೋದವು ದೇವೇಂದ್ರ ವಾಪಸ್ಸು ಮನೆಗೆ ಬರಲೇ ಇಲ್ಲ . ಮೀರಾ ಮತ್ತು ಮಕ್ಕಳು ದೇವೇಂದ್ರನ ದಾರಿ ಕಾಯುತ್ತ ಅಳುತ್ತಾ ಕೂಡುವುದೇ ಆಯಿತು ದಿನಗಳು ವಾರಗಳು ಸಾಗಿಹೊದವು ಮನೆಯ ಪರಿಸ್ತಿತಿ ತುಂಬಾ ಹಾಳಾಯಿತು ಪ್ರತಿದಿನ ಕಣ್ಣಿರಿನ ಜೀವನ ದೇವೇಂದ್ರ ಒಂದು ಕಾಗದ ಸಹ ಬರೆಯುವ ಗೋಜಿಗೆ ಹೋಗಲಿಲ್ಲ ಒಂದು ಫೋನ್ ಸೌಲಬ್ಯ ಸಹ ಇಲ್ಲ ದೇವೇಂದ್ರ ಯಲ್ಲಿ ಇದ್ದಾನೆ ಅನ್ನೋದೇ ಗೊತ್ತಿಲ್ಲ ರಾಣೆಬೇನ್ನುರಿಗೆ ಸಂದೇಶ ಕಳಿಸಬೇಕು ಅಂದ್ರೆ ಅಲ್ಲಿನ ವಿಳಾಸ ಸಹ ತಿಳಿದಿಲ್ಲ ಮೀರಾ ಮತ್ತು ಮಕ್ಕಳು ದಿಕ್ಕು ತೋಚದೆ ಏನು ಮಾಡಬೇಕು ಅಂತ ತಿಳಿಯದೆ ಕೇವಲ ಅಳುತ್ತಾ ಕುಳಿತುಕೊಳ್ಳುವುದು ಒಂದೇ ಮಾರ್ಗವಾದಂತೆ ಆಗಿದೆ. ಅಡುಗೆ ಮನೆ ಖಾಲಿ ಆಗಲು ಬಂತು ಇರುವ ಯಲ್ಲ ದವಸಧಾನ್ಯಗಳು ಮುಗಿಯಲು ಬಂತು ಇವತ್ತು ಒಂದು ಹೊತ್ತು ಅಡುಗೆ ಮಾಡಿಕೊಂಡರೆ ಆಯಿತು ರಾತ್ರಿಗೆ ಒಂದು ಹಿಡಿ ಅಕ್ಕಿ ಇಲ್ಲ ಮೀರಾ ಗರ್ಬಿಣಿ ಬೇರೆ ಮನೆಯಿಂದ ಆಚೆ ಹೋಗೋಹಾಗೆ ಇಲ್ಲ ಹೋದರೆ ಯಲ್ಲಿ ದೇವೇಂದ್ರ ಕೊಂದುಬಿದುತ್ತಾನೋ ಅನ್ನೋ ಭಯ ಬೇರೆ ಹೀಗೆ ದಿನಗಳು ಉರುಳುತ್ತಿವೆ ಮನೆಯಲ್ಲಿ ಉಟವೇ ಇಲ್ಲ ಎರಡು ದಿನವಾಯಿತು ಉಟ ಮಾಡಿ ಮಕ್ಕಳು ಹಸಿವೆಯಿಂದ ಅಳುತ್ತಾ ಇದ್ದಾರೆ ಯಾವ ಬಂದುಗಳು ಸಹ ಬಂದು ಸಹಾಯ ಮಾಡುವ ಪರಿಸ್ತಿತಿ ಇಲ್ಲ ಮೂರು ದಿನವಾಯಿತು ನಾಲ್ಕು ದಿನವಾಯಿತು ಅಯ್ಯೋ ಪಾಪ ಮನೆಯಿಂದ ಹೊರಗೆ ಸಹ ಹೋಗದ ಮೀರಾ ಅವತ್ತು ಪಕ್ಕದ ಮನೆಗೆ ಹೋಗಿ ಸ್ವಲ್ಪ ಅಕ್ಕಿ ಕೇಳಿ ತಂದು ಅಡುಗೆ ಮಾಡಿದಳು ಅವತ್ತು ಉಟ ಮಾಡಿದರು ಮತ್ತೆ ನಾಳೆಯ ಚಿಂತೆ ವೆಂಕಟೇಶ್ ಪ್ರತಿ ದಿನ ಮುಂಜಾನೆ ರೈಲ್ವೆ ಸ್ಟೇಷನ್ ಗೆ ಕುಡಿಯುವ ನೀರು ತರಲು ಹೋಗುತ್ತಿದ್ದ ಬೆಟಗೇರಿ ಪಟ್ಟಣದಲ್ಲಿ ನಗರಸಭೆಯ ನೀರು ಕುಡಿಯೋಕೆ ಆಗೋಲ್ಲ ವಾರಕ್ಕೊಮ್ಮೆ ಮಾತ್ರ ನೀರು ಬರುತ್ತಾ ಇತ್ತು ಅದನ್ನು ಶಖರಿಸಿಕೊಂಡರೆ ಮಾತ್ರ ಕುಡಿಯೋಕೆ ಆಗೋದು ಇಂತ ಸ್ತಿತಿಯಲ್ಲಿ ಬೆಟಗೇರಿ ಜನಕ್ಕೆ ರೈಲ್ವೆ ಸ್ಟೇಷನ್ ಒಂದು ರೀತಿ ಆಶೀರ್ವಾದ ಕೊಟ್ಟಿತ್ತು ಕುಡಿಯೋ ನೀರಿಗಾಗಿ ಅವತ್ತು ನೀರು ತುಂಬಲು ರೈಲ್ವೆ ಸ್ಟೇಷನ್ ಗೆ ಹೋದ ವೆಂಕಟೇಶ್ ಕಣ್ಣಿಗೆ ಕಂಡಿದ್ದು ರಾಶಿ ರಾಶಿ ಚಲ್ಲಿರುವ ಗೋದಿ ರೈಲ್ವೆ ಗೊದಾಂ ನಲ್ಲಿ ಲೋಡ್ ಮಾಡೋವಾಗ ರಸ್ತೆಗುಂಟ ಚಲ್ಲಿರುವ ಗೋದಿ ಹಸಿವೆ ನಿಗುತ್ತೆ ಅನ್ನೋ ಆಸೆ ನಾಲ್ಕನೇ ತರಗತಿಗೆ ಹೋಗೋ ವೆಂಕಟೇಶ್ ನಿಗೆ ಬಂತು ನೀರು ತರಲು ತೆಗೆದುಕೊಂಡು ಹೋದ ಕೊಡದಲ್ಲಿ ಗೋದಿಯನ್ನು ತುಂಬಿಸಿಕೊಂಡ ಎತ್ತಿಕೊಳ್ಳಲು ಆಗದೆ ಒದ್ದಾದಿಬಿಟ್ಟ ಅದರಲ್ಲಿ ಅರ್ದ ಚಲ್ಲಿ ಅರ್ದವನ್ನು ಹೇಗೋ ಎತ್ತಿಕೊಂಡು ಮನೆಕಡೆ ಸಾಗಿದ ಮನೆಯೊಳಗೇ ಸಹ ಹೋಗದೆ ಮನೆಯ ಹಿಂದೆ ಗೋದಿಯನ್ನು ಸುರುವಿ ಮತ್ತೆ ರೈಲ್ವೆ ಸ್ಟೇಷನ್ ಹೋರಟ ಹೀಗೆ ಎಷ್ಟೋ ಗೋದಿಯನ್ನು ಶಖರಿಸಿ ಮತ್ತೆ ಒಂದು ಕೊಡ ಕುಡಿಯುವ ನೀರನ್ನು ತಂದ ನೀರಿಗೆ ಹೋದ ಮಗ ಇನ್ನು ಯಾಕೆ ಬರಲಿಲ್ಲ ಅಂತ ಕಾಯುತ್ತ ಚಿಂತಿಸುತ್ತಾ ಕುಳಿತ ತಾಯಿ ಮಗ ಬಂದದನ್ನು ನೋಡಿ ಸಮಾಧಾನಗೊಂಡು ಯಾಕಪ್ಪ ಲೇಟಾಯ್ತು ಅಂತ ಕೇಳಿದಳು ಮಾತಾಡಲು ಸಹ ಕೊಡದೆ ತಾಯಿಯನ್ನು ಮನೆಯ ಹಿಂದೆ ಕರೆದುಕೊಂಡು ಹೋಗಿ ತಾನು ತಂದ ಗೋದಿಯನ್ನು ತೋರಿಸಿ ನಡೆದ ಸಂಗತಿ ಹೇಳಿದ ಮೀರಾಳ ಕಣ್ಣುಗಳು ತುಂಬಿ ಬಂದವು ಹೊಟ್ಟೆ ಹಸಿವು ನಿಗಿಸಿಕೊಳ್ಳಲು ಧಾನ್ಯ ಸಿಕ್ಕಿದೆ ಅಂತ ಖುಷಿ ಪಡಬೇಕೋ ಅಥವಾ ಮಗ ಮಾಡಿದ್ದು ತಪ್ಪು ಅಂತ ದುಕ್ಕಪದಬೇಕೋ ಒಂದು ತಿಳಿಯದೆ ಏನು ಮಾತಾಡದೆ ಸುಮ್ಮನಾದಳು ಮನೆಯಲ್ಲಿರುವ ಗೋದಿಯನ್ನು ಹಿಟ್ಟು ಮಾಡೋಕೆ ಕಾಸಿಲ್ಲ ಮನೆಲಿರುವ ಒಳ್ಳು (ಮೊದಲಿನ ಕಾಲದಲ್ಲಿ ಗೋದಿ ಬಿಸಲು ಉಪಯೋಗಿಸುತ್ತ್ತಿದ್ದ ಕಲ್ಲು) ಏನೋ ಒಂದು ಅಡುಗೆ ಮಾಡಿ ದೇವರ ಮುಂದೆ ತಂದು ದೇವರೇ ಇದೇನು ನಾನು ಏನು ತಪ್ಪು ಮಾಡಿದೆ ಅಂತ ಈ ಶಿಕ್ಷೆ ಮಗ ಮಾಡಿದ್ದು ತಪ್ಪು ಆದರೆ ಇದು ತಪ್ಪು ಹೀಗೆ ಮಾಡಬಾರದು ಅಂತ ಹೇಳೋ ಪರಿಸ್ತಿತಿ ಕೂಡ ನನಗಿಲ್ಲ ಹೊರಗೆ ಹೋಗಿ ದುಡಿದು ತರಬೇಕು ಅಂದ್ರೆ ನಾನು ಆ ಪರಿಸ್ತಿತಿಯಲ್ಲಿ ಸಹ ಇಲ್ಲ ಕಟ್ಟಿಕೊಂಡ ಗಂಡ ಅಯ್ಯೋ ದೇವರೇ ...... ಮಸಸಾಯಿಚ್ಚೆ ಅತ್ತು ತಾನೇ ಸಮಾಧಾನ ಮಾಡಿಕೊಂಡ ಮಾಡಿಕೊಂಡ ಅಡುಗೆಯನ್ನು ಮಕ್ಕಳಿಗೆ ಬಡಿಸಿ ತಾನು ತಿಂದಳು ಮಗ ಶಾಲೆಗೇ ಹೋದ ದಿನವುರುಳಿ ಸಂಜೆಯಾಯಿತು ವೆಂಕಟೇಶ್ ಮನೆಗೆ ಬಂದಾಗ ಕುಡಿದು ಮತ್ತಿನಲ್ಲಿರುವ ತಂದೇಯ ಸ್ವರ ಕೇಳಿದ ಕೂಗಾಡುತ್ತಿರುವ ಸ್ವರ ಕೇಳಿದ ಅಪ್ಪ ಬಂದಿದ್ದಾರೆ ಅನ್ನೋ ಖುಷಿಯಲ್ಲಿ ಅಪ್ಪನ ಹತ್ತಿರ ಹೋದ ವೆಂಕಟೇಶ್ ಕಿಟಾರನೆ ಕುರುಚಿಕೊಂಡ

ಮುಂದಿನ ಸಂಚಿಕೆಯಲ್ಲಿ 

Monday, May 21, 2018

ರೂಪವತಿ ಸಂಚಿಕೆ 2

ಸಂಚಿಕೆ 2 

ಉದರದಲ್ಲಿ ಮೂಡಿದ ದಿನದಿಂದಲೂ ಹಿಂಸೆಯನ್ನು ಅನುಭವಿಸುತ್ತ ಹುಟ್ಟಿದ ಮಗು ಈಗ ಭೂಮಿಗೆ ಬಂದಾಗಿದೆ 21ನೇಯ ದಿನ ಮಗುವಿನ ನಾಮಕರಣ ವೆಂಕಟೇಶ್ 
ದಿನಗಳು ಕಳೆಯತೊಡಗಿತು ದಿನಗಳು ವಾರಗಳು ತಿಂಗಳುಗಳು ದೇವೇಂದ್ರ ತನ್ನ ಕಾರ್ಯದಲ್ಲಿ ಸಫಲನಾಗಿದ್ದ ಏನೋ ಮಾಡಿ ಹೊಟ್ಟೆ ಹೊರುತ್ತಿದ್ದ ದೇವೇಂದ್ರ ಈಗ ಪತ್ರಕರ್ತ “ಕಾಳಿಂಗ ಸರ್ಪ” (ಪತ್ರಿಕೆಯ ಹೆಸರು ಬದಲಿಸಲಾಗಿದೆ) ಪತ್ರಿಕೆ ನಡೆಸಲು ಕೇಂದ್ರ ಸರಕಾರದಿಂದ ಮಂಜೂರಾತಿ ಪಡೆದುಕೊಂಡು ಪತ್ರಿಕೆ ನಡೆಸೋ ಕಾರ್ಯದಲ್ಲಿ ಮಗ್ನನಾದ ನಾನು ಇನ್ನು ಮುಂದೆ ಕುಡಿಯೋಲ್ಲ ಎಂದು ಹೆಂಡತಿಗೆ ಪ್ರಮಾಣ ಮಾಡಿದ ಪತ್ರಿಕೆಗೆ ವರದಿ ಕಲೆಹಾಕುವ ಕೆಲಸದಲ್ಲಿ ಮಗ್ನನಾದ ಮಾರ್ಚ್ 1980 “ಕಾಳಿಂಗ ನಾಗ” ಪತ್ರಿಕೆ ಬಿಡುಗಡೆ ಆಯಿತು 
ಮೊದಲ ಸಂಚಿಕೆಯಲ್ಲಿಯೇ ಅದಿಕಾರಿಗಳ ರಾಜಕೀಯ ಪುಡಾರಿಗಳ ನಿದ್ದೆಗೆಡಿಸಿತು ಮೊದಲನೆಯ ಸಂಚಿಕೆ ಇಡಿ ಜಿಲ್ಲೆಯ ತುಂಬ ಪತ್ರಿಕೆಯದ್ದೆ ಸುದ್ದಿ ಪತ್ರಿಕೆ ಪ್ರಸಿದ್ದವಾಯಿತು ಅಕ್ಕ ಪಕ್ಕದ ಜಿಲ್ಲೆಗಳಿಗೂ ಸ್ವಲ್ಪ ಬಿಸಿ ತಾಗಲು ಸುರುವಾಯಿತು 
ದೇವೇಂದ್ರ ಈಗ Editor. ದೇವೇಂದ್ರ, ದಿನಗಳೆದಂತೆ ಪತ್ರಿಕೆ ತುಂಬಾ ಪ್ರಸಿದ್ದವಾಯಿತು ಹಣ ಬರಲು ಸುರುವಾಯಿತು ಅಧಿಕಾರ ಕೈಲಿ ಇತ್ತು ಮನೆ ಮತ್ತು ಪ್ರೆಸ್ ಗಾಗಿ ಸರಕಾರದಿಂದ ಸ್ಥಳ ಮಂಜೂರು ಮಾಡಿಕೊಂಡದ್ದು ಆಯಿತು ಈಗ ಮನೆ ಕಟ್ಟುವ ವಿಚಾರ ದೇವೇಂದ್ರನಿಗೆ ಚಿಂತೆ ಕಾಡತೊಡಗಿತು ಮನೆ ಕಟ್ಟೋದು ಹೇಗೆ ಇಂತ ಹಲವು ಚಿಂತೆಗಳ ಮದ್ಯ ಪತ್ರಿಕೆ ಇನ್ನು ಹೆಚ್ಚು ಪ್ರಭಾವ ಬೀರಲು ಆರಂಬಗೊಂಡಿತು 4 ವರ್ಷ ಸತತ ಪರಿಶ್ರಮದಿಂದ ಮನೆ ನಿರ್ಮಾಣ ಕಾರ್ಯ ಮುಗಿಯಿತು 
‘ಕಾಳಿಂಗ ನಾಗ” ಸುತ್ತಲಿನ ನಾಲ್ಕು ಜಿಲ್ಲೆಗಳಲ್ಲಿ ಮನೆಮಾತಾಯಿತು ಪ್ರತಿಯೊಬ್ಬನೂ ಕಾಳಿಂಗ ನಾಗ ಪತ್ರಿಕೆ ಓದಲು ಕಾಯುತ್ತಾ ಇರುತ್ತಿದ್ದರು ಪ್ರಕಟವಾದ ಮೊದಲ ದಿನವೇ ಪತ್ರಿಕೆ ಮಾರಾಟವಾಗಿಬಿಡುತ್ತಾ ಇದ್ದವು ಕೆಲ ಗೆಳೆಯರು ಸೇರಿಕೊಂಡರು ಪತ್ರಿಕೆಗೆ ಒಂದು ಕಚೇರಿಯೂ ಆಯಿತು ದೇವೇಂದ್ರ ಒಬ್ಬ ಅಸಾಮಾನ್ಯ ವ್ಯಕ್ತಿಯಾಗಿ ರೂಪುಗೊಂಡರು 
ವೆಂಕಟೇಶ್ ಈಗ ನಗರದ ಪ್ರಸಿದ್ದ ಆಂಗ್ಲ ಮಾಧ್ಯಮ ಶಾಲೆಗೆ ಹೋಗಲು ಆರಂಬಿಸಿದ ಒಂದು ಕಾಲದಲ್ಲಿ ಏನು ಇಲ್ಲದೆ ಜೀವನದ ಯಾವ ಆಸೆ ಇಲ್ಲದೆ ಬದುಕುತ್ತ ಕುಡಿತದ ದಾಸನಾಗಿದ್ದ ದೇವೇಂದ್ರ ಈಗ ಪ್ರಸಿದ್ದ ಪತ್ರಿಕೋದ್ಯಮಿ, PSI ಆಗಿ ಪೋಲಿಸ್ ಇಲಾಖೆಯಲ್ಲಿ ಭರ್ತಿಯಾಗಿ ಗುಲಾಮಗಿರಿ ಮಾಡೋದು ಬೇಡ ಅಂತ ಕೆಲಸವನ್ನು ಬಿಟ್ಟು ಪತ್ರಿಕೆಯನ್ನು ಆರಿಸಿಕೊಂಡವರು ದೇವೇಂದ್ರ ಕರ್ನಾಟಕ ಮಹಾವಿದ್ಯಾಲಯದಲ್ಲಿ MA ಮುಗಿಸಿಕೊಂಡ ದೇವೇಂದ್ರ ಒಳ್ಳೆ ವಿಚಾರವಂತರೂ ಕೂಡ ಆದರೆ ಕಟ್ಟಿಕೊಂಡ ಕನಸುಗಳು ನನಸಾಗದೇ ಕುಡುಕನಾಗಿದ್ದ ಆದರೆ ಈಗ ಒಬ್ಬ ಮೇಧಾವಿ ಪತ್ರಕರ್ತ ದಿನಗಳು ಉರುಳತೊಡಗಿದವು ದೇವೇಂದ್ರ ಪ್ರಭಾವದಿಂದ ಮಹಾಪ್ರಭಾವಕ್ಕೆ ಹೋಗತೊಡಗಿದ ಮನೆಯಲ್ಲಿ ಸಂತಸದ ವಾತಾವರಣ ವರ್ಷಗಳು ಉರುಳಿಹೊದವು, ಈಗ ದೇವೇಂದ್ರ ಕೇವಲ ಒಬ್ಬ ಪತ್ರಕರ್ತ ಅಲ್ಲ ರಾಷ್ಟ್ರೀಯ ಪಕ್ಷವೊಂದಕ್ಕೆ ಅಬ್ಯರ್ಥಿ ಪತ್ರಿಕೆಯ ಜೊತೆ ಈಗ ರಾಜಕೀಯದ ಪ್ರಭಾವ ಆದರೆ ಅವರ ದುರಾಸೆ ಒಂದೇ ಸಾರಿ ಗಗನಕ್ಕೆ ದುಮುಕಬೇಕು ಅಂತಾಗಿತ್ತು ಒಂದೇ ಸಾರಿಗೆ ಪಂಚಾಯತ್ ದಿಂದ ಪಾರ್ಲಿಮೆಂಟ್ ಗೆ ನೆಗೆದುಹೋದರು ಆದರೆ ಭಹು ಮತಗಳ ಅಂತರದಿಂದ ಗದ್ದುಗೆಯೇರುಲು ಆಗಲಿಲ್ಲ ಅಂದು ಮೆತ್ತೆ ದೇವೇಂದ್ರ ಕುಡಿದು ಮನೆಗೆ ಬಂದರು. ಮತ್ತೆ ಅದೇ ರಾಗ ಅದೇ ತಾಳ ಕೆಲ ದಿನ ಕುಡಿದು ಮತ್ತೆ ಬಿಟ್ಟುಬಿಟ್ಟರು, ಕುಡಿದಾಗ ಅವರ ಅವತಾರ ರಾಕ್ಷಸಕ್ಕಿಂತಲೂ ಸ್ವಲ್ಪ ಹೆಚ್ಚು ಮತ್ತೆ ದಿನಗಳು ಉರುಳಿದಂತೆ ಪತ್ರಿಕೆ ಬೇರೆಯದೇ ದಿಕ್ಕು ಹಿಡಿಯಿತು ನೇರ ಧಿಟ್ಟ ಎಂಬ ಸ್ಲೋಗನ್ ಹೋಗಿ  ತನ್ನ ದಿಕ್ಕು ಬದಲಿಸಿತು ಹಣಯೇನೋ ಬರುತ್ತಾ ಇಟ್ಟು ಆದರೆ ಪತ್ರಿಕೆಯ ಪ್ರಭಾವ ದಿನದಿಂದ ದಿನಕ್ಕೆ ಕುಂದುತ್ತಾ ಬಂತು ಹಣದ ಪ್ರಭಾವದ ಮುಂದೆ ದೇವೇಂದ್ರನಿಗೆ ತನ್ನ ಕನಸು ಕಾಣಿಸಲಿಲ್ಲ ಹೀಗೆ ದಿನಗಳು ಉರುಳುತ್ತಾ ಹೋದವು 
ವೆಂಕಟೇಶ್ ಈಗ 4 ನೇ ತರಗತಿ ಈ ನಾಲ್ಕು ವರ್ಷಗಳಲ್ಲಿ ವೆಂಕಟೇಶ್ ತನ್ನ ಪ್ರೀತಿಯ ತಂಗಿ (ಗೀತಾಳನ್ನು) ಕಳೆದುಕೊಂಡ ಮತ್ತೊಬ್ಬ ತಂಗಿ Soumya ತಮ್ಮ Suresh ಜೊತೆಗಿದ್ದರು ಸುಲೋಚನ ಮತ್ತೆ ಗರ್ಬವತಿಯಾಗಿದ್ದರು ದೇವೇಂದ್ರ ದಿನದಿಂದ ದಿನಕ್ಕೆ ವಿಚಿತ್ರವಾಗತೊಡಗಿದ ಒಂದು ದಿನ ಮನೆಗೆ ಬಂದ ದೇವೇಂದ್ರ ತನ್ನ ಜೊತೆ ಮತ್ತೊಂದು ಹೆಣ್ಣನ್ನು ಮದುವೆಯಾಗಿ ಕರೆದುಕೊಂಡು ಬಂದ....................


Sunday, May 20, 2018

ರೂಪವತಿ / ಸಂಚಿಕೆ 1

ಸಂಚಿಕೆ 1

ಮದ್ಯರಾತ್ರಿ ಕತ್ತಲೆ ಪ್ರಪಂಚ ಯಲ್ಲೋ ದೂರದಲ್ಲಿ ನಾಯಿ ಗೋಳಿಡುವ ಶಬ್ದ ಕಪ್ಪೆಗಳ ಗುಡುರು ಗುಡುರು ಸ್ವರ ಆಗಾಗ ಶಿಳ್ಳು ಹಾಕುವಂತೆ ಹುಳುವಿನ ಆರ್ತನಾದ ಸೊಳ್ಳೆಗಳ ಕಲರವ ಯಾವ ಪರಿವೇ ಇಲ್ಲದೆ ಘಾಡವಾಗಿ ನಿದ್ರಿಸುತ್ತಿರುವ ಊರು ‘ಬೆಟಗೇರಿ’ ರಾತ್ರಿಯ ಜಾವದಲ್ಲಿ ನಿರ್ಜನವಾಗಿ ಕಾಣುವ ರಸ್ತೆ ಅಲ್ಲಿ ರಸ್ತೆ ಅಂಚಿಗೆ ಅಂಟಿಕೊಂಡು ಒಂದು ಭಾವಿ ಅದರ ಪಕ್ಕದಲ್ಲಿ ಒಂದು ಮನೆ ಏನೋ ಶಬ್ದ ಗೋಳಿಡುವ ಶಬ್ದ ಅಳುವ ಶಬ್ದ ತುಂಬಾ ನೋವಿನ ಶಬ್ದ ಕಣ್ಣಿರಿನ ಶಬ್ದ ಅದರ ಮದ್ಯ ಪಟಾರನೆ ಸಪ್ಪಳ ಬಂದ ಕೂಡಲೇ ಮತ್ತೆ ಜೋರಾಗಿ ಕಿರುಚಾಡುವ ಶಬ್ದ ಗೋಳಿಡುವ ಶಬ್ದ ಅಂಗಲಾಚುವ ಶಬ್ದ “ ಅಯ್ಯೋ ಹೊಡಿಬೇಡಿ ಹೊಡಿಬೇಡಿ ಹೊಡಿಬೇಡಿ ನಂಗೆ ಆಗ್ತಾ ಇಲ್ಲ ತುಂಬಾ ಸಂಕಟ ಆಗ್ತಾ ಇದೆ ಹೀಗೆ ಹೊಡಿಯೋ ಬದಲು ನನ್ನ ಒಂದೇ ಸಾರಿ ಕೊಂದುಬಿಡಿ” ಪಟಾರ್ ಜೋರಾಗಿ ಬಿದ್ದ ಆ ಹೊಡೆತಕ್ಕೆ ಒಂದು ಕ್ಷಣ ಶಬ್ದವೇ ನಿಂತುಹೋದ ಅನುಭವ, ಕೆಲ ಹೊತ್ತು ಶಾಂತ ಶಬ್ದವೇ ಇಲ್ಲ ಮತ್ತೆ ಅದೇ ಗೋಳಾಟ ನೋವಿನ ಆಕ್ರಂದನ ಹೀಗೆ ರಾತ್ರಿ ಕಳೆದು ಚುಮುಚುಮು ಬೆಳಕು ಗೋಚರಿಸತೊಡಗಿತು ಇದು ಯಾವುದು ಗೊತ್ತೇ ಇಲ್ಲದೆ ಸೂರ್ಯ ತನ್ನ ಪಾಡಿಗೆ ತಾನು ತನ್ನ ಕಾರ್ಯದಲ್ಲಿ ಮಗ್ನನಾಗಿದ್ದ ಕಾರಹುಣ್ಣಿಮೆ ಮದ್ಯರಾತ್ರಿ ಆಕಾಶದಲ್ಲಿ ಚಂದ್ರ ನಗುತ್ತಾ ಇದ್ದಾನೆ ಆದ್ರೆ ಮನೆಯಲ್ಲಿ ಅಮಾವಾಸ್ಯಯ ಕಗ್ಗತ್ತಲು ತುಂಬು ಗರ್ಬಿಣಿ ಮದುವೆಯಾಗಿ ತಂದೆ ತಾಯಿ ಬಂದು ಬಳಗ ಯಲ್ಲರನ್ನು ಬಿಟ್ಟು ದೇವೇಂದ್ರನ ಕೈ ಹಿಡಿದು ಬಂದವಳು ಯಾವ ಬಂದುಗಳು ಹತ್ತಿರದಲ್ಲಿ ಇಲ್ಲ ಸತ್ತರೆ ಹೂನುವವರು ಯಾರು ಇಲ್ಲ ಆದರೆ ಕೈ ಹಿಡಿದ ಗಂಡ ಕುಡಿತದ ದಾಸ ದಿನಾಲೂ ಚಿತ್ರಹಿಂಸೆ ಕೊಡುವಂತವ, ಆಕಾಶ ಬೆಳಕಿನಿಂದ ತುಂಬಿತ್ತು ಚಂದ್ರ ಹೊಳೆಯುತ್ತಾ ಇದ್ದನು ಆ ಕತ್ತಲ್ಲಲ್ಲು ಬೆಳಕಿನ ಕಿರಣಗಳು ಭೂಮಿಗೆ ಅಪ್ಪಳಿಸುತ್ತಾ ಇತ್ತು ಪಾಪ ಆಶ್ರಯ ಬಯಸಿ ದೇವೇಂದ್ರನ ಕೈ ಹಿಡಿದು ಬಂದ ಮೀರಾ ದಿಕ್ಕು ಇಲ್ಲದಂತೆ ಆಗಿದ್ದಳು ತುಂಬು ಗರ್ಬಿಣಿ ಬೇರೆ. ಹೆರಿಗೆ ನೋವು ಆರಂಬವಾದಂತೆ ಕಾಣುತ್ತಾ ಇದೆ ಪಾಪ ಇಂತಾ ತುಂಬು ಗರ್ಬಿಣಿಗೆ ಜೀವ ಹೋಗೋ ಹಾಗೆ ಹಿಂಸೆ ಕೊಟ್ಟು ಬೆಳಿಗ್ಗೆ ಹೊರಗೆ ಹೋದ ಗಂಡ ಇನ್ನುವರೆಗೂ ಮನೆಗೆ ಬಂದಿಲ್ಲ... ಅಮ್ಮ ಅಮ್ಮ ........ ತುಂಬು ಗರ್ಬಿಣಿಯ ಬಾಯಿಂದ ಬರುತ್ತಿರುವ ಆರ್ತನಾದ...... ದೇವರೇ ಕರುಣಾಮಯ ಶಬ್ದ ಆದರೆ ಆ ದೇವರಿಗೂ ಕಿವಿ ಕೇಳದಂತ ಪರಿಸ್ತಿತಿ ಇಂತ ನರಳಾಟದ ಮದ್ಯ ರಾತ್ರಿ ಕಳೆಯಿತು ಕಾರಹುಣ್ಣಿಮೆ ಪಾಡ್ಯ ಉರತುಂಬ ಹಬ್ಬದ ವಾತಾವರಣ ಆದರೆ ಮೀರಾ ನ ಪಾಲಿಗೆ ಕರಾಳದಿನ ತುಂಬು ಗರ್ಬವತಿ ಮೀರಾ ಅಳುತ್ತಲೇ ಇದ್ದಾಳೆ ಬೇನೆ ತಿನ್ನುತ್ತಲೇ ಇದ್ದಾಳೆ ತಾಯಿ ತಂದೆ ಅಕ್ಕ ತಂಗಿ ಅಣ್ಣ ತಮ್ಮ ಯಾರು ಇಲ್ಲ ಅವಳಿಗೆ ಯಲ್ಲರೂ ಇದ್ದರು ದೇವೇಂದ್ರನ ಗೊಂಡಾ ಅವತಾರಕ್ಕೆ ಯಾರು ಬರೋಹಾಗೆ ಇಲ್ಲ ಇಂತಹ ಸ್ತಿತಿಯಲ್ಲಿ ಪಕ್ಕದಲ್ಲಿ ಕಣ್ಣಿರು ಒರೆಸಲು ಗಂಡನೂ ಇಲ್ಲ ಮದ್ಯಾನದ ಉರಿಬಿಸಿಲು ಸಂಕಟ ಆಗ್ತಾ ಇದೆ ತುಂಬಾ ಬೇನೆ ಆಸ್ಪತ್ರೆಗೆ ಹೋಗೋಕೆ ಆಗೋಲ್ಲ ಕರೆದುಕೊಂಡು ಹೊಗೊರಿಲ್ಲ ಅನಾತೆ ಅನಾತೆ ಅನಾತೆ ಪಾಪ ಮೀರಾಳ ವೇಧನೆ ನೋಡಿ ಅಕ್ಕ ಪಕ್ಕದ ಕೆಲ ಜನ ಜಮಾಯಿಸಿದರು ಗಂಡನ ಚರಿತ್ರೆ ಹೇಗಿದೆ ಅಂದ್ರೆ ಪಕ್ಕದ ಮನೆಯವರು ತಪ್ಪಿಯೂ ಸಹ ಮನೆ ಹತ್ತಿರ ತಿರುಗಿ ನೋಡಬಾರದು ಆದರೆ ಮೀರಾಳ ಸ್ತಿತಿ ನೋಡಲಾಗದ ಜನ ಪಾಪ ತಮ್ಮಮನೆಯ ಹೆಣ್ಣುಮಕ್ಕಳನ್ನು ಕರೆದು ಮೀರಾಳ ಹತ್ತಿರ ಬಿಟ್ಟರು ತುಂಬಾ ಬೆನೆಯಲ್ಲಿರುವ ಮಿರಾಳನ್ನು ಆಸ್ಪತ್ರೆಗೆ ಸಾಗಿಸಬೇಕು ಅನ್ನೋ ಅಷ್ಟರಲ್ಲಿ ಕಿಟಾರನೆ ಕಿರುಚಾಟ ಕ್ಷಣದಲ್ಲಿಯೇ ಮಗುವಿನ ಅಳುವ ಸದ್ದು ಮೀರಾಳ ಹೆರಿಗೆ ಮನೆಯಲ್ಲಿಯೇ ಆಗಿಹೋಯಿತು ಕಾರಹುಣ್ಣಿಮೆ ಪಾಡ್ಯ ಮಗುವಿನ ಜನನ ಹಬ್ಬಕ್ಕೆ ದೇವರು ಕೊಟ್ಟ ಉಡುಗೊರೆ ಅಂತ ತಿಳಿದು ನೋವಿನಲ್ಲೂ ಮೀರಾ ಸ್ವಲ್ಪ ನಕ್ಕಳು ಮಗುವನ್ನು ನೋಡಿ ಕಣ್ಣಿರು ಹಾಕಿದಳು ಒಂದು ರೀತಿ ಸಂತೋಷ ಆದರೂ ಮತ್ತೊಂದು ರೀತಿ ಸಂಕಟ ಮುಂದೆ ಮಗುವಿನ ಗತಿ ಏನಾಗುತ್ತೋ ಅನ್ನೋ ಚಿಂತೆ.

ಮುಂದೆ ಓದಿ ನಾಳಿನ ಸಂಚಿಕೆಯಲ್ಲಿ.....

https://m.facebook.com/groups/211039999683277?view=permalink&id=211357676318176