ರೂಪವತಿ : ಸಂಚಿಕೆ - 7
ದೇವೇಂದ್ರ ಸರಸರನೆ ಬರುತ್ತಾ ಇದ್ದಾನೆ ಮನೆಗೆ ಹೋಗುವ ಲಗುಬಗೆಯಲ್ಲಿ ಸ್ಟೇಷನ್ ಒಂದು ಅಂಚಿನಲ್ಲಿ ತಟ್ಟನೆ ನಿಂತುಬಿಟ್ಟ ದೇವೇಂದ್ರನ ಮನಸಲ್ಲಿ ಏನೋ ಗೊಂದಲ ಏನು ಮಾಡಬೇಕು ಅಂತ ತಿಳಿಯದೆ ಅರ್ದ ಅಹಂತೆ ಅಲ್ಲೇ ನಿಂತ 3 ಸಿಗರೇಟನ್ನು ಸುಟ್ಟುಹಾಕಿದ ಕೊನೆಗೆ ಏನೋ ನಿರ್ದರಿಸಿಕೊಂಡು ಸರಸರನೆ ಪಕ್ಕದಲ್ಲೇ ಇದ್ದ ಸ್ವಪ್ನ ಬಾರ್ ನತ್ತ ಧಾವಿಸಿ ಮೇಜಿನಲ್ಲಿ ಕುಳಿತು ಆರ್ಡರ್ ಮಾಡಿದ “ಒಂದು ಕ್ವಾಟರ್ ಓಲ್ಡ್ ಮ೦ಕ್” ಮತ್ತೆ ಸಿಗರೇಟು ತೆಗೆದು ಅದಕ್ಕೆ ಬೆಂಕಿ ತಗುಲಿಸಿದ. ತಲೆಯಲ್ಲಿ ಪೂರ್ಣ ನಾಳೆ ಏನಾಗುತ್ತೋ ಅನ್ನೋ ಯೋಚನೆ ಮಗ ಹೇಗಿದ್ದಾನೋ ಅನ್ನೋ ತವಕ ಇದೆ ಯೋಚನೆಯಲ್ಲಿ ಬಾರ್ ಗೆ ಬಂದು ಕುಡಿಯಲು ಕುಳಿತುಕೊಂಡ. ಸಿಗರೇಟಿನ ಜೊತೆ ಸರಾಯಿ ಕುಡಿಯುತ್ತ ಕುಳಿತ ದೇವೇಂದ್ರ ಕುಡಿತದಲ್ಲೇ ಮಗ್ನನಾದ ಏನೇನೋ ಗುನುಗುಟ್ಟುತ್ತಾ ಇದ್ದಾನೆ ಒಬ್ಬನೇ ಮಾತಾಡ್ತಾ ಇದ್ದಾನೆ “ವೆಂಕಟ್ ಸಾರಿ ಕಣೋ ಮಗಾ ನಿನ್ನೆ ಇಡಿ ರಾತ್ರಿ ಕಾಡಿನಲ್ಲಿ ನಿನ್ನನ್ನು ಇಟ್ಟಿದ್ದೆ ನಾನು ಒಳ್ಳೆ ತಂದೆ ಅಲ್ಲ” I Love you ಕಣೋ ನೀನು ನನ್ನ ಪಾಲಿನ ಅದೃಷ್ಟದ ಹರಳು ನೀನು ಹುಟ್ಟಿದ ಮೇಲೆ ನಾನು ಪತ್ರಕರ್ತ, ಹೀಗೆ ಗುಣುಗುಟ್ಟುತ್ತಾ ಮತ್ತಷ್ಟು ಕುಡಿದ ತಟ್ಟನೆ ದೇವೇಂದ್ರನಿಗೆ ನೆನಪಾಗಿದ್ದು ಉಮಾ, ಹೇ ನನ್ನ ಮುದ್ದಿನ ರಾಣಿ ನಾ ನಿನ್ನ ನೋಡಬೇಕು ಕಣೆ ನಿ ನನಗೆ ಬೇಕೇ ಬೇಕು ನೀನಿಲ್ಲದೆ ನಾ ಬದುಕೊಲ್ಲ ನಂಗೆ ನೀನು ಬೇಕು ನಂಗೆ ನೀನು ಬೇಕು ನಂಗೆ ನೀನು ಬೇಕು ಐ ಲವ್ ಯೂ ಮೈ ಡಾರ್ಲಿಂಗ್...... ಹೀಗೆ ಗುಣಗುತ್ತುತ್ತಾ ಇದ್ದ ದೇವೇಂದ್ರನಿಗೆ ಯಾರೋ ಅಲ್ಲಾಡಿಸುತ್ತಿರುವ ಅನುಭವ.. ಹೇ ಯಾವನಲೇ ಅವನು........... ಸಾರ್ ತುಂಬಾ ಟೈಮ್ ಆಯಿತು ಬಾರ್ ಕ್ಲೋಸ್ ಮಾಡುತ್ತಾ ಇದ್ದೇವೆ ಹೋಗಿ ಮನೆಗೆ (ಬಾರ್ ಸರ್ವರ್ ನ ಸ್ವರ)... ಓಕೇ ಮೈ ಬಾಯ್ ಸರ್ವರ್ ಗೆ ಟಿಪ್ ಕೊಟ್ಟು ತೋರಾಡುತ್ತ ಅಲ್ಲಿಂದ ಮೇಲೆದ್ದ ದೇವೇಂದ್ರ ಮನೆ ಕಡೆ ಹೆಜ್ಜೆಹಾಕಿದ. ಬೆಳಿಗ್ಗೆ ಹೋದ ದೇವೇಂದ್ರ ಇನ್ನು ಮನೆಗೆ ಬರಲಿಲ್ಲ ರಾತ್ರಿ 12 ಆಗೋಕೆ ಬಂತು ಇನ್ನು ಮಲಗದೇ ದೇವೇಂದ್ರನ ದಾರಿ ಕಾಯುತ್ತ ಕುಳಿತಿದ್ದಾಳೆ ಮೀರಾ ದೇವೇಂದ್ರ ಕುಡಿತ ಬಿಟ್ಟ ಅನ್ನೋ ಸಂತೋಷ ಮನೆಮಾಡಿದೆ ಇನ್ನು ಉಟ ಸಹ ಮಾಡದೆ ಗಂಡನ ಜೊತೆಗೂಡಿ ಉಟ ಮಾಡಬೇಕು ಅಂತ ಮೀರಾ ಕಾಯುತ್ತಾ ಇದ್ದಾಳೆ ವೆಂಕಟೇಶನಿಗೆ ಸ್ವಲ್ಪ ಗುಣವಾಗಿದೆ ಮಲಗಿದ್ದಾನೆ ಪ್ರೇಮ ಮತ್ತು ಗಿರೀಶ ಕೂಡ ಮಗಗಿದ್ದಾರೆ ಗರ್ಬಿಣಿ ಮೀರಾ ಗಂಡನ ದಾರಿ ಕಾಯುತ್ತ ಹಾಗೆ ಕುಳಿತುಕೊಂದವಳು ಸ್ವಲ್ಪ ನಿದ್ರೆ ಬಂದಂತೆ ಸೋಫಾ ಮೇಲೆ ಸುಮ್ಮನೆ ವರಗಿಕೊಂದಿದ್ದಾಳೆ “ ಕಬಿನಾ ಕಬಿ ಕಹಿ ನಾ ಕಹಿ ಕೊಯಿನಾ ಕೊಯಿತೋ ಆಯೇಗಾ..... ಕಬಿನಾ ಕಬಿ” ಮೀರಾಳ ಕಿವಿಗೆ ಪಟ್ಟನೆ ಅಪ್ಪಳಿಸಿತು ಹಿಂದಿ ಸಂಗಿತದ ಕರ್ಕಷ ಧ್ವನಿ, ದೇವರೇ ಮೀರಾಳ ಪ್ರಾಣವೇ ಹೋದ ಅನುಭವ ಯಾಕೆಂದ್ರೆ ಇದು ಗಂಡನ ಸ್ವರ ಯಾವಾಗಲು ಕುಡಿದಾಗ ಗಂಡ ಕರ್ಕಷವಾಗಿ ಹಾಡುವ ಹಿಂದಿ ಸಂಗೀತ, ಕುಡಿತ ಬಿಡುತ್ತೇನೇ ಅನ್ನೋದು ಕೆಲವ ನಾಟಕ ಬಣ್ಣದ ಮಾತು ಅಂತ ಅಳಲು ಆರಂಬ ಮಾಡಿದಳು ಮೀರಾಳಿಗೆ ಅತಿವ ದುಕ್ಕವಾಗಿ ಕಣ್ಣಿರು ತಾನಾಗೇ ಇಳಿಯಲು ಆರಂಬವಾಯಿತು... ಹೊಯ್........ ಟಕ್ ಟಕ್ ಟಕ್ ಬಾಗಿಲು ಬಡಿಯುವ ಶಬ್ದ ದೇವೇಂದ್ರ ಬಾಗಿಲು ತಟ್ಟುತ್ತ ಇದ್ದ.. ಲೇ ಬೇಗನೆ ಬಾಗಿಲ ತಗೆ ಒಳಗೆ ಏನ್ ಮಾಡುತ್ತಾ ಇದ್ದೀಯ, ಯಾರಿದ್ದಾರೆ ಒಳಗೆ......ಹೇಯ್, ಅಳುತ್ತಿದ್ದ ಮೀರಾ ಕಣ್ಣು ಒರೆಸಿ ಬಂದು ಬಾಗಿಲು ತೆರೆಯೋದರೊಳಗೆ ದೇವೇಂದ್ರ ಚಿರಾಡಲು ಸುರು ಮಾಡಿಕೊಂಡ, ಅಪ್ಪನ ಸ್ವರ ಕೇಳುತ್ತಲೇ ಮಕ್ಕಳೆಲ್ಲ ನಿದ್ದೆಯಿಂದ ಯಚ್ಚರಗೊಂಡು ನಡುಗಲು ಸುರು ಮಾಡಿಕೊಂಡರು, ಮೀರಾ ಬಾಗಿಲು ತೆರೆಯುತ್ತಲೇ ಧಡಾರನೆ ಬಿದ್ದು ಹೊಡೆತ ಕಾಲಿನಿಂದ ಒದ್ದ ಹೊಡೆತಕ್ಕೆ ಕ್ಷಣ ಮೂರ್ಚೆ ಹೋದಂತೆ ಆಯಿತು ಮಿರಾಳಿಗೆ ದೊಡ್ಡ ಬಂಡೆಗಲ್ಲು ಯದೆಮೇಲೆ ಬಂದು ಅಪ್ಪಳಿಸಿದ ಅನುಭವ. ಯಾಕೆ ಬೇಗನೆ ಬಾಗಿಲು ತಗೆಯಲಿಲ್ಲ ಮನೆಯಲ್ಲಿ ಮತ್ತಾರು ಇದ್ದರು ಅನ್ನೋ ವಿಷಯವನ್ನು ಮುಂದಿಟ್ಟುಕೊಂಡು ದೇವೇಂದ್ರ ಮೀರಾಳಿಗೆ ಮನಬಂದಂತೆ ಥಳಿಸಿದ ಬಿಡಿಸಲು ಹೋದ ವೆಂಕಟೇಶನಿಗೆ ಸಹ ಒದೆತ ಬಿದ್ದಿತ್ತು ಪ್ರೇಮ ಮತ್ತು ಪುಟ್ಟ ಮಗು ಗಿರೀಶ ಕೂಡ ಹೊಡೆತಕ್ಕೆ ತತ್ತರಿಸಿ ಹೋಗಿದ್ದರು, ಮನೆ ರಣರಂಗವಾಗಿತ್ತು ಮನೆಯಲ್ಲಿ ಕಿರುಚಾಡುವ ಶಬ್ದ ಸುತ್ತಲು ಯಲ್ಲರಿಗೂ ಕೇಳಿಸಿದರೂ ಸಹ ಯಾರು ಬಿಡಿಸೋಕೆ ಬರೋಲ್ಲ ದಿನಾ ಸಾಯೋಗಿಗೆ ಅಳೋರು ಯಾರು ಎಂಬುದೇ ಜನರ ಆಲೋಚನೆಯಾಗಿತ್ತು. ಸಿಗರೇಟು ಹಚ್ಚಿಕೊಂಡು ಸೇದುತ್ತಿದ್ದ ದೇವೇಂದ್ರ ಮೀರಾಳ ದೇಹದ ಮೇಲೆ ಸಿಗರೆಟಿನಿಂದ ಸುಟ್ಟು ಹಾಕಿದ ಕಿಟಾರನೆ ಕಿರುಚಿಕೊಂಡಳು ಮೀರಾ. ಕಿರುಚಿ ನನ್ನ ಮರ್ಯಾದೆ ತೆಗೆತಿಯಾ ಅಂತ ಮತ್ತಷ್ಟು ಹೊಡೆದ... ಅಳುತ್ತ ಕುಳಿತುಕೊಂಡಿದ್ದರು ಮಕ್ಕಳು ತಾವು ಅಳುತ್ತಿರುವ ಶಬ್ದವೇ ಹೊರಬರಬಾರದು ಅಂತ ತುಂಬಾ ಯಚ್ಚರಿಕೆವಹಿಸಿ ಅಳುತ್ತಾ ಇದ್ದರು ಅಳುವ ಶಬ್ದ ಕೇಳಿದರೆ ಯಲ್ಲಿ ಅಪ್ಪ ಬಂದು ಹೊಡಿತಾನೆ ಅನ್ನೋ ಹೆದರಿಕೆ ಮಕ್ಕಳಿಗೆ, ಮೀರಾ ಒಂದು ಮೂಲೆಯಲ್ಲಿ ಕುಳಿತಿದ್ದಾಳೆ ಅಳುತ್ತಿದ್ದಾಳೆ ನರಳುತ್ತಿದ್ದಾಳೆ ಅದು ಶಬ್ದವಿಲ್ಲದ ನರಳಾಟ, ಕುಡಿತದ ಅಮಲಿನಲ್ಲಿ ಜೋರಾಗಿ ಚಿರಾಡುತ್ತಿದ್ದ ದೇವೇಂದ್ರ ಬಿದ್ದುಕೊಂಡ ನೆಲದಲ್ಲೇ ಮಲಗಿಬಿಟ್ಟ ಅಳುತ್ತ ಕುಳಿತುಕೊಂಡಳು ಮೀರಾ ತಾಯಿಯ ಯೇದೆಗೊರಗಿಕೊಂಡು ಮಕ್ಕಳು ಕೂಡ ಅಳುತ್ತ ಅಲ್ಲೇ ನಿದ್ದೆ ಹೋದವು.
ಮುಂದಿನ ಸಂಚಿಕೆಯಲ್ಲಿ

No comments:
Post a Comment