Followers

Thursday, May 24, 2018

ರೂಪವತಿ : ಸಂಚಿಕೆ - 5

ಮೈ ನಡುಗುತ್ತಾ ಇದೆ ತುಂಬಾ ಚಳಿ ಅನ್ನಿಸ್ತಾ ಇದೆ ತುಂಬಾ ಜ್ವರ ಇದೆ ವೆಂಕಟೇಶಗೆ ಕತ್ತಲಲ್ಲಿ ಭಯನಕ ದೃಶ್ಯಗಳ ಮದ್ಯ ರಾತ್ರಿ ಕಳೆದ ಕಾರಣ ಸಂಪೂರ್ಣ ಕುಗ್ಗಿಹೊಗಿದ್ದಾನೆ ಅಮ್ಮನ ತೊಡೆ ಮೇಲೆ ಮಲಗಿ ಅಳುತ್ತ ಇದ್ದಾನೆ ಮಗನ ಸ್ತಿತಿ ನೋಡಿ ಮೀರಾ ಅಳುತ್ತಾ ದೇವರಿಗೆ ಬೈತಾ ಇದ್ದಾಳೆ ಇದನ್ನೆಲ್ಲಾ ಗಮನಿಸುತ್ತ ಕೈಲಿ ಸಿಗರೆಟ್ ಹಚ್ಚಿಕೊಂಡು ದಂ ಎಳೆಯುತ್ತ ಕುಳಿತಿದ್ದ ದೇವೇಂದ್ರ ಬಿರಬಿರನೆ ಬಚ್ಚಲು ಮನೆಗೆ ಹೋದ ದೇವೇಂದ್ರ ಬಿರಬಿರನೆ ಯದ್ದು ಸರಸರನೆ ಬಾತ್ ರೂಂ ಗೆ ಯಾಕೆ ಹೋದ ಅನ್ನೋದನ್ನು ತಿಳಿಯದೆ ಮತ್ತೆ ಮೀರಾ ಮತ್ತು ಮಕ್ಕಳು ಕಂಗಾಲಾದರು ಯಾಕೆಂದ್ರೆ ಬಾತ್ ರೂಂ ನಲ್ಲಿ ದೇವೇಂದ್ರ ಒಂದು ಬೆತ್ತವನ್ನು ಬಚ್ಚಿ ಇಡುತ್ತಾ ಇದ್ದ ಬಡಿಯೋಕೆ ಅಂತ ವೆಂಕಟೇಶ್ ತತ್ತರಿಸಿಹೋಗಿದ್ದ ಮೊದಲೇ ಜ್ವರದಿಂದ ಬಳಲುತ್ತಿದ್ದ ವೆಂಕಟೇಶ್ ಮತ್ತಷ್ಟು ಬಳಲಿಹೋದ ಮೀರಾ ಭಯದಿಂದ ಕಂಗಾಲಾದಳು ತಂಗಿ ಅಳುತ್ತ ಅಡುಗೆ ಮನೆಗೆ ಓಡಿ ಹೋಗಿ ಅವಿತುಕೊಂಡಳು ತಮ್ಮ ಇದರ ಯಾವುದೇ ಅರಿವು ಇಲ್ಲದೆ ತನ್ನ ಪಾಡಿಗೆ ತಾನು ಆಟ ಆಡುತ್ತ ಇದ್ದ.
ಬಾತ್ ರೂಂ ಬಾಗಿಲು ತೆರೆದುಕೊಂಡಿತು ಹೊರಗೆ ಬಂದ ದೇವೇಂದ್ರ ನೇರ ದೇವರ ಮನೆಗೆ ಹೋಗಿ ಪೂಜೆ ಮಾಡಿದ ಬಳಿಕ ಮೀರಾಳ ಹತ್ತಿರ ಬಂದು ಇವತ್ತಿನಿಂದ ನಾನು ಯಾವತ್ತೂ ಕುಡಿಯೋಲ್ಲ ಎಂದು ಭಾಷೆ ಕೊಟ್ಟು ವೆಂಕಟೇಶನ ಮುದ್ದಾಡಿ ಆಸ್ಪತ್ರೆಗೆ ಕರೆದುಕೊಂಡು ಹೊರಟ.
ಮೀರಾ ತುಂಬಾ ಸಂತೋಷಗೊಂಡಿದ್ದಳು ಗಂಡ ಕುಡಿಯೋದನ್ನು ಬಿಡುತ್ತೇನೆ ಅಂತ ಖಡಾಖಂಡಿತವಾಗಿ ಹೇಳಿದ್ದ ಇದೆ ಮೊದಲ ಬಾರಿ ಸ್ನಾನ ಮಾಡಿಕೊಂಡು ಪೂಜೆ ಮಾಡಿಕೊಂಡು ಬಂದು ಮೀರಾಳ ಜೊತೆ ಪ್ರೀತಿಯಿಂದ ಮಾತಾಡಿದ್ದು ತಂಗಿ ಕೂಡ ಸಂತೋಷಗೊಂಡಳು ಆಸ್ಪತ್ರೆಗೆ ಹೋದ ದೇವೇಂದ್ರ ವೆಂಕಟೇಶನಿಗೆ ಟ್ರೀಟ್ ಮಾಡಿಸಿಕೊಂಡು ಮೊದಲ ಬಾರಿ ಮಗನನ್ನು ಸಿನೆಮಾಗೆ ಕರೆದುಕೊಂಡು ಹೋದ ಹಿಂದಿ ಸಿನೆಮಾ “ಶೋಲೆ” ವೆಂಕಟೇಶ್ ಮೊದಲ ಬಾರಿ ನೋಡಿದ ಚಿತ್ರ ಸಿನೆಮಾ ಮುಗಿಸಿ ಸಂತೆ ಮಾಡಿಸಿಕೊಂಡು ಸಿಹಿ ತಿನಿಸುಗಳನ್ನು ಕೊಡಿಸಿಕೊಂಡು ಸಂಜೆ ಮನೆಗೆ ಕರೆದುಕೊಂಡು ಬಂದ
ವೆಂಕಟೇಶ್ ನಿಗೆ ಇನ್ನು ಸಂಪೂರ್ಣ ಜ್ವರ ಕಡಿಮೆಯಾಗಿರಲಿಲ್ಲ ಬಂದು ವೆಂಕಟೇಶ್ ಮಲಗಿಕೊಂಡ ಮೀರಾ ಖುಷಿಯಾಗಿದ್ದಳು ಮನೆಯಲ್ಲಿ ಹಬ್ಬದ ವಾತಾವರಣ ಒಳ್ಳೆ ಅಡುಗೆ ಮಾಡಿ ರಾತ್ರಿ ಉಟ ಮಾಡಿ ಮಗಗಿದರು ದೇವೇಂದ್ರ ಸಂಪೂರ್ಣ ದಿನ ಕುಡಿಯದೇ ಇದ್ದಿದ್ದು ವಿಶೇಷವೇ ಆಗಿತ್ತು ಮರುದಿನ ಬೆಳಿಗ್ಗೆ ಮೀರಾಳ ಜೊತೆ ಮಾತಿಗಿಳಿದ ಪತ್ರಿಕೆ ಎರಡು ತಿಂಗಳಿನಿಂದ ಪ್ರಿಂಟ್ ಮಾಡಿಲ್ಲ ಹಿಗೆಆದರೆ ಮುಂದೆ ಪತ್ರಿಕೆಗೆ ಬೆಲೆ ಇಲ್ಲದ ಹಾಗೆ ಆಗಿಬಿಡುತ್ತೆ ಮತ್ತೆ ಪತ್ರಿಕೆ ಆರಂಬ ಮಾಡಬೇಕು ಶಾಸಕರೊಬ್ಬರ ಹಾಟ್ ನ್ಯೂಸ್ ಒಂದು ಸಿಗಲಿಕ್ಕಿದೆ ತನಿಖೆ ಮಾಡಬೇಕು ಮೂರು ತಿಂಗಳು ಜನ ಪತ್ರಿಕೆ ಓದಲಿಲ್ಲ ಈ ಬಾರಿ ಶಾಸಕರ ವರದಿ ಹಾಕಿದ್ರೆ ಇಡಿ ಕರ್ನಾಟಕದಲ್ಲಿ ಪತ್ರಿಕೆ ಪ್ರಸಿದ್ದವಾಗುತ್ತೆ ಇವತ್ತು ಹೋಗಿ ವರದಿ ಕಲೆಹಾಕಿಕೊಂಡು ಬರುವೆ ನಾಳೆಯಿಂದ ಪತ್ರಿಕೆ ಪ್ರಕಟಮಾಡುವ ಕಾರ್ಯ ಮಾಡಬೇಕು ಅನ್ನುತ್ತ ಒಂದು ಸಿಗರೇಟಿಗೆ ಬೆಂಕಿ ತಗುಲಿಸಿ ದಂ ಎಳೆದು ರಿಲ್ಯಾಕ್ಸ್ ಆದ ದೇವೇಂದ್ರ ದೇವೇಂದ್ರನ ತಲೆಯಲ್ಲಿ ಶಾಸಕನ ಆ ವಿಷಯವೇ ಓಡಾಡುತ್ತಿತ್ತು ಮಿಂಚಿನ ಸುದ್ದಿ ನಗರದ ಯಾವ ಪತ್ರಿಕೆಗಳು ಆ ಶಾಸಕರ ವಿರುದ್ದ ವರದಿ ಹಾಕಲಿಕ್ಕೆ ಹೆದರುತ್ತಾ ಇದ್ದರು ಜನರ ಕಣ್ಣಿಗೆ ಕಾಣದೆ ಇರುವ ಶಾಸಕನ ವಿಷಯವನ್ನು ಸಾಕ್ಷಿ ಸಮೇತ ಜನರ ಮುಂದೆ ತರಬೇಕು ‘ಕಾಳಿಂಗ ನಾಗ” ಪತ್ರಿಕೆಯೆಂದರೆ ಸಾಕು ರಾಜಕೀಯ ನಾಯಕರ ಮತ್ತು ಭ್ರಷ್ಟ ಅದಿಕಾರಿಗಳು ನಡುಗಬೇಕು ನಗರವನ್ನೇ ನಡುಗಿಸಿಬಿಡುವ ಆ ಶಾಸಕನ ವಿಷಯ ಕಾಳಿಂಗ ನಾಗ ಪತ್ರಿಕೆಯಲ್ಲಿ ಪ್ರಕಟವಾದರೆ.... ವ್ಹೌ ಸುಪರ್ ಹೀಗೆ ಆಲೋಚನೆ ಮಾಡುತ್ತಾ ಪೆನ್ನು ಮತ್ತು ಪೇಪರ್ ಹಿಡಿದು ಕುಳಿತ ದೇವೇಂದ್ರ ಬರೆಯೋಕೆ ಆರಂಬ ಮಾಡಿದ ಟೇಬಲ್ ಮೇಲಿನ ಪೇಪರಗಳು (ಹಾಳೆಗಳು) ವರದಿಗಳಿಂದ ತುಂಬುತ್ತಾ ಇದ್ದವು ಜೊತೆಗೆ Ash Tray ಸಹ ಎಷ್ಟು ಸಿಗರೇಟು ಸೇದಿದ್ದರೋ ಲೆಕ್ಕವೇ ಇಲ್ಲ ಮನೆ ತುಂಬಾ ಹೋಗೆ ಹೋಗೆ ಹೋಗೆ ಸಿಗರೇಟಿನ ಘಾಟು ಮನೆ ತುಂಬಾ ತುಂಬಿಕೊಂಡಿತ್ತು ಸ್ವಲ್ಪ ಹೊರಗೆ ಸುತ್ತಾಡಿ ಮತ್ತೆ ಮನೆಗೆ ಬಂದು ಬರೆಯೋಕೆ ಕುಳಿತುಕೊಂಡ ದೇವೇಂದ್ರ. ಸಂಪೂರ್ಣ ರಾತ್ರಿ ದೇವೇಂದ್ರ ಯಚ್ಚರವಾಗೆ ಇದ್ದ ಬೆಳಕು ಆಗಿದ್ದೆ ಗೊತ್ತಾಗಲಿಲ್ಲ ಬಾತ್ಮಿದಾರರಿಗೆ ಸಂದಿಸಿ ಪತ್ರಿಕೆ ಪ್ರಕಟಣೆ ಮತ್ತು ಹಂಚಿಕೆ ಕುರಿತು ಮಾತುಕತೆ ಮುಗಿಸಿ ವರದಿಗಾಗಿ ಬೇಕಾಗುವ ಕೆಲ ಭಾವಚಿತ್ರಗಳ ಶೂಟ್ ಮಾಡಲು ಹೆಗಲಿಗೆ ಒಂದು ಬ್ಯಾಗ್ ಹಾಕಿಕೊಂಡು ಕೈಲಿ ಕ್ಯಾಮೆರಾ ನೇತಾಡಿಸಿಕೊಂಡು ಬಾತ್ಮಿದಾರರ ಜೊತೆ ಹೊರಡಲನುವಾದ.......

ಮುಂದಿನ 

No comments:

Post a Comment