Followers

Saturday, May 26, 2018

ರೂಪವತಿ : ಸಂಚಿಕೆ - 6

ಕಾಳಿಂಗ ನಾಗ ಪತ್ರಿಕಾ ಕಾರ್ಯಾಲಯ ಪತ್ರಿಕೆ ಮುದ್ರಣ ಕಾರ್ಯದಲ್ಲಿ ಬಾತ್ಮಿದಾರರು ಮಗ್ನರಾಗಿದ್ದಾರೆ ಯಲ್ಲರಿಗೂ ಕುತೊಹಲ ಪತ್ರಿಕೆ ಪ್ರಕಟವಾದ ಕೂಡಲೇ ಜನರ ಪ್ರತಿಕ್ರಿಯೆ ಏನು ಒಬ್ಬ ಪ್ರಭಾವಿ ರಾಜಕೀಯ ವ್ಯಕ್ತಿಯ ಕುರಿತು ಸಂಚಲನವುಂಟು ಮಾಡುವ ಪ್ರಮುಖ ವರದಿ ಮುದ್ರಣಗೊಳ್ಳುತ್ತಾ ಇದೆ ಪತ್ರಿಕೆ ಪ್ರಭಾವದಿಂದ ಅಧಿಕ ಪ್ರಭಾವಕ್ಕೆ ಹೋಗುತ್ತೆ ಅನ್ನೋ ಉತ್ಸಾಹ ಯಲ್ಲಾ ಬಾತ್ಮಿದಾರರಲ್ಲೂ ಮನೆಮಾಡಿಕೊಂಡಿತ್ತು ಮುದ್ರಣಕಾರರು ಅಕ್ಷರ ಜೋಡಣಾ ಕಾರ್ಯದಲ್ಲಿ ಮಗ್ನರಾಗಿದ್ದರು. ಅದು ಚಲಿಗಾಳವಾದರೂ ಅವರು ಬೆವರುತ್ತಿದ್ದಾರೆ ನಾಳೆ ಏನಾಗುತ್ತೆ ಯಲ್ಲರಿಗೂ ಕಾಡುತ್ತಿರುವ ಯಕ್ಷಪ್ರಶ್ನೆ ಒಬ್ಬ ಸಾಮಾನ್ಯ ರಾಜಕೀಯ ವ್ಯಕ್ತಿ ಏಕಾಏಕಿ ಶ್ರೀಮಂತ ಆಗಿದ್ದು ಹೇಗೆ ? ಜನರ ಮುಂದೆ ಇರುವ ಉತ್ತರವಿಲ್ಲದ ಪ್ರಶ್ನೆಗೆ ದೇವೇಂದ್ರನ ಬಳಿ ಉತ್ತರವಿತ್ತು ಆ ಉತ್ತರ ಜನರ ಮುಂದೆ ಪ್ರದರ್ಷಿಸುವುದಕ್ಕಾಗಿ ದೇವೇಂದ್ರ ಸಿದ್ದತೆ ಮಾಡಿಕೊಂಡಿದ್ದ ಅದಕ್ಕೆ ಬೇಕಾಗುವ ಕೆಲವು ಭಾವಚಿತ್ರಗಳು ಒಬ್ಬರ ಬಳಿ ಇದ್ದವು ಆ ಭಾವಚಿತ್ರಗಳನ್ನು ಪಡೆದುಕೊಳ್ಳಲು ದೇವೇಂದ್ರ ಅಣ್ಣಿಗೇರಿ ಗ್ರಾಮಕ್ಕೆ ಬಂದಿದ್ದ ಅದೊಂದು ಚಿಕ್ಕ ಹಳ್ಳಿ ಗದಗ ಪಟ್ಟಣದಿಂದ ಸ್ವಲ್ಪ ದೂರದಲ್ಲಿರುವ ಆ ಹಳ್ಳಿ ದೇವೇಂದ್ರ ಒಂದು ಮನೆಯ ಮುಂದೆ ನಿಂತು ಬಾಗಿಲು ತಟ್ಟಿದ ಬಾಗಿಲು ತೆರೆದುಕೊಂಡಿತು ಒಳಗೆ ಹೋದ ದೇವೇಂದ್ರ 10 ನಿಮಿಷದಲ್ಲಿ ಹೊರಗೆ ಬಂದ ದೇವೇಂದ್ರನ ಕೈಲಿ ಒಂದು ಕವರ್ ಇತ್ತು. ಅಯ್ಯೋ.......... ಪತ್ರಿಕೆ ಪ್ರಿಂಟ್ ಆಗೋಕೆ ರೆಡಿಯಾಗಿದೆ ಒಂದೇ ಒಂದು ಪೋಟೋ ಬಂದ್ರೆ ಸಾಕು ಪತ್ರಿಕೆ ಪೂರ್ಣ ಬಾತ್ಮಿದಾರರು ದೇವೇಂದ್ರನ ದಾರಿ ಕಾಯುತ್ತಾ ಇದ್ದಾರೆ ಬೆಳಿಗ್ಗೆ ಹೋದ ದೇವೇಂದ್ರ ಇನ್ನು ಬರಲಿಲ್ಲ ಬಾತ್ಮಿದಾರರಿಗೆ ಚಿಂತೆಯಾಗಿದೆ ............. ಅದೇ ಹೊತ್ತಿಗೆ ದೇವೇಂದ್ರ ಕಚೇರಿ ಪ್ರವೇಶಿಸಿದ ಬಂದವನೇ ಜೊತೆಗೆ ತಂದಿದ್ದ ಪೋಟೋ ಬ್ಲಾಕ್ ಮುದ್ರಣಕ್ಕೆ ಕೊಟ್ಟು ತನ್ನ ಚೇರ್ ನಲ್ಲಿ ಕುಳಿತು ತುಟಿಗೆ ಸಿಗರೆಟ್ ಅಂಟಿಸಿ ಬೆಂಕಿ ತಗುಲಿಸಿದ ,,,,,,, ಸಿಗರೇಟಿನ ಹೋಗೆ ಸುರುಳಿಯಾಗಿ ಗಾಳಿಯಲ್ಲಿ ಲಿನವಾಗುತ್ತಾ ಇತ್ತು ಅತ್ತ ಪತ್ರಿಕೆ ಪ್ರಕಟವಾಗುತ್ತಾ ಇತ್ತು ವೆಂಕಟೇಶ್ ನಿಗೆ ಇನ್ನು ಪೂರ್ಣ ಗುಣವಾಗಿಲ್ಲ ಇನ್ನೂ ಜ್ವರ ಹಾಗೆಯೇ ಇದೆ ಮೈ ಸುಡುತ್ತಾ ಇದೆ ಮೀರಾ ಮಗನ ಆರೈಕೆ ಮಾಡೋದರಲ್ಲಿ ಮಗ್ನಗೊಂಡಿದ್ದಾಳೆ ಪ್ರೇಮ ಶಾಲೆಯಿಂದ ಬಂದು ಅಣ್ಣನ ಪಕ್ಕದಲ್ಲಿ ಸುಮ್ಮನೆ ಕುಳಿತುಕೊಂಡಳು ಮೀರಾ ಅಡುಗೆ ಮನೆ ಸೇರಿಕೊಂಡಳು ಮೀರಾ ತುಂಬಾ ಸಂತೋಷಗೊಂಡಿದ್ದಾಳೆ ದೇವೇಂದ್ರ ಕುಡಿಯೋದನ್ನು ಬಿಟ್ಟೆ ಅನ್ನೋ ಆ ಶಬ್ದ ಮೀರಾಳ ಕಿವಿಯಲ್ಲಿ ಸಂಗಿತದಂತೆ ಭಾಸವಾಗುತ್ತಿದೆ ಗಂಡ ಮಕ್ಕಳು ತಾನು ವ್ಹೌ ಎಂತಹ ಸುಂದರ ದೃಶ್ಯ ಕುಣಿದಾಡಬೇಕು ಅನ್ನಿಸುತ್ತಿದೆ ಮನದಲ್ಲೇ ದೇವರ ಹೆಸರು ಹೇಳುತ್ತಾ ಗಂಡನಿಗೆ ಇಷ್ಟವಾದ ಚಿಕನ್ ಮಸಾಲಾ ಮಾಡುತ್ತಿದ್ದಾಳೆ ನಿಮಿಷ ನಿಮಿಷಕ್ಕೂ ಅವಳ ಕಣ್ಣುಗಳು ಬಾಗಿಲಿನತ್ತ ಹೋಗುತ್ತಿದೆ ರಾತ್ರಿಯಾಗಲು ಆಯಿತು ಗಂಡ ಇನ್ನೂ ಮನೆಗೆ ಬರಲಿಲ್ಲ ಅಂತ ಚಿಂತೆ ಮತ್ತೇನಾದರೂ ಕೊಟ್ಟ ಮಾತು ತಪ್ಪಿ ಕುದಿದುಬಿಡುತ್ತಾರೆ ಅನ್ನೋ ಹೆದರಿಕೆಯಿದ್ದರೂ ಇವತ್ತು ದೇವೇಂದ್ರನ ಧ್ವನಿಯಲ್ಲಿದ್ದ ಆ ಸ್ಪಷ್ಟತೆ ಅವರ ಮಾತನ್ನು ನಂಬುವಂತೆ ಮಾಡಿತು ಅಡುಗೆ ಕಾರ್ಯ ಮುಗಿಸಿ ಮತ್ತೆ ಮಗನ ಬಳಿಯಲ್ಲಿ ಬಂದು ಕುಳಿತುಕೊಂಡು ಕತೆ ಹೇಳಲು ಆರಂಬ ಮಾಡಿದಳು ಪತ್ರಿಕೆ ಪ್ರಕಟ ಕಾರ್ಯ ಮುಗಿಸಿಕೊಂಡ ದೇವೇಂದ್ರ ಒಮ್ಮೆ ಕಾಳಿಂಗ ನಾಗನನ್ನು ಕೈಲಿ ಹಿಡಿದು ಉದ್ಗರಿಸಿದ “ಒಂದು ಹನಿ ಮಸಿ ಕೋಟಿ ಜನಕ್ಕೆ ಬಿಸಿ “ಹಃ ಹಃ ಹಃ ಗಹಗಹಿಸಿ ನಗುತ್ತಾ.. ನಾಳೆಯಿಂದ ಗದಗ ಜಿಲ್ಲೆಯಲ್ಲೊಂದು ಹೊಸ ಇತಿಹಾಸದ ಆರಂಬ ಕರ್ನಾಟಕದ ದುಷ್ಟರ ಪಾಲಿಗೆ ಕಾಳಿಂಗ ನಾಗ. ಬಾತ್ಮಿದಾರರು ಹಂಚಿಕೆದಾರರು ಮುದ್ರಣಕಾರರು ಯಲ್ಲರನ್ನು ಸೇರಿಸಿಕೊಂಡು ಕೆಲವು ಯಚ್ಚರಿಕೆಯನ್ನು ಕೊಟ್ಟು ಪತ್ರಿಕೆಯ ಮರು ಮುದ್ರಣ ಮಾಡಬೇಕು ಅಂತ ಅನ್ನಿಸಿದರೆ ನನ್ನ ಅಪ್ಪಣೆಗಾಗಿ ಕಾಯದೇ ಮುದ್ರಿಸಿ ಹಂಚಿರಿ ಎಂದು ತಾಕಿತು ಮಾಡಿದ ಬಾತ್ಮಿದಾರರು ಮಾಡಬೇಕಾದ ಕಾರ್ಯಗಳ ಕುರಿತು ಸ್ವಲ್ಪ ಸಮಾಲೋಚಿಸಿದ ನಂತರ ಪತ್ರಿಕೆಯನ್ನು ಹಂಚಿಕೆಗಾಗಿ ಹಸ್ತಾಂತರಿಸಿ ಮತ್ತೊಂದು ಸಿಗರೇಟನ್ನು ತುಟಿಗಂಟಿಸಿ ದಂ ಎಳೆದು ಸುರುಳಿ ಸುರುಳಿಯಾಗಿ ಹೋಗೆ ಬಿಟ್ಟ ದೇವೇಂದ್ರನ ಬಾಯಿಂದ ಸುರುಳಿಯಾಗಿ ಹೋಗುತ್ತಿರುವ ಹೋಗೆ ರೂಂ ತುಂಬಾ ತುಂಬಿಕೊಂಡಿತು ಹೀಗೆ ಆಲೋಚನೆಯಲ್ಲಿ ಮುಳುಗಿಹೋಗಿದ್ದ ದೇವೇಂದ್ರ ತಟ್ಟನೆ ಯಚ್ಚರಗೊಂಡ. ವೆಂಕಟೇಶ್ ನಿನ್ನೆಯಿಂದ ಜ್ವರದಿಂದ ಬಳಲುತ್ತಿದ್ದಾನೆ ಈಗ ಹೇಗಿದ್ದಾನೋ ಮನೆಯ ನೆನಪಾಗಿ ಮಲೆದ್ದು ಮತ್ತೊಂದು ಸಿಗರೆಟ್ ಅಂಟಿಸಿ ಬಿರಬಿರನೆ ಹೆಜ್ಜೆ ಹಾಕಿದ.

ಮುಂದಿನ ಸಂಚಿಕೆಯಲ್ಲಿ

No comments:

Post a Comment