Followers

Tuesday, May 22, 2018

ರೂಪವತಿ - ಸಂಚಿಕೆ 3

ಲೇ ......... ಇವಳು ನನ್ನ ಹೆಂಡತಿ ಉಮಾ, ಲೇ ಮಕ್ಳ ಇವಳು ನಿಮ್ಮ ಅವ್ವ್ ಇವತ್ತಿಂದ ಇಲ್ಲೇ ಇರುತ್ತಾಳೆ (ಕುಡಿತದ ಮತ್ತಿನಲ್ಲಿ ದೇವೇಂದ್ರನ ಅರ್ಭಟ, ಮೀರಾ ಮಾತನಾಡುವ ಸ್ತಿತಿಯಲ್ಲಿ ಇಲ್ಲ ಮಾತಾನಾಡಲು ಆಗೋಲ್ಲ ಕೂಡ ದೇವೇಂದ್ರ ಒಬ್ಬ ರಾಕ್ಷಸ ಒಂದೇ ಒಂದು ಮಾತಾಡಿದರೂ ಸಾಯೋಹಾಗೆ ಹೊಡೆಯೋಕೆ ಸುರು ಮಾಡುತ್ತಾನೆ, ವಿಧಿಯಾಟ ಅಂತ ಮೀರಾ ಸುಮ್ಮನಾದಳು ಗಂಡ ಬೇರೆ ಹೆಂಗಸನ್ನು ಮಧುವೆಯಾದ ವಿರೋಧ ಮಾಡಬೇಕು ಎಂಬ ಭಾವನೆ ಇದ್ದರೂ ಭಯ ಭಯ ಭಯ ಉಮಾ ಮನೆಯಲ್ಲೇ ಇರಲು ಆರಂಬ ಮಾಡಿದಳು ತುಂಬು ಗರ್ಬಿಣಿ ಮೀರಾ ಚಿಂತೆಯಲ್ಲೇ ದಿನ ದೂಡಲು ಆರಂಬ ಮಾಡಿದಳು ಉಮಾ ಮತ್ತು ದೇವೇಂದ್ರನ ಮದ್ಯ ತುಂಬಾ ಹೊಂದಾಣಿಕೆ ಇತ್ತು ಇಬ್ಬರೂ ಸಾರಾಯಿಯ ದಾಸರು ರಾಣೆ ಬೆನ್ನೋರಿನ ಸ್ಲಂ ಹೆಂಗಸು ಅವಳು ಮೊದಲೇ ಎರಡು ಮಧುವೆಯಾಗಿ ಬಿಡುಗಡೆ ಗೊಂದು ಈಗ ದೇವೇಂದ್ರನ ತೆಕ್ಕೆಯಲ್ಲಿ ಬಂದಿದ್ದಳು ದೇವೇಂದ್ರ ಅವಳ ಸಂಗ ಬಯಸಿ ಅವಳಲ್ಲೇ ಮಗ್ನನಾದ ಪ್ರತಿದಿನ ಇಬ್ಬರು ಹಕ್ಕಿಗಳಂತೆ ಹಾರಾಡ ಹತ್ತಿದರು ದಿನಗಳು ಉರುಳಹತ್ತಿದವು ದಿನಗಳೆದಂತೆ ದೇವೇಂದ್ರ ಉಮಾಳ ಸಂಗ ಬಯಸಿದ ಆದರೆ ಉಮಾ ವಾಪಸ್ಸು ಊರಿಗೆ ಹೋಗುತ್ತೇನೆ ನಾ ಬೇಕಾದ್ರೆ ನೀವು ಅಲ್ಲೇ ಬಂದು ಇರಿ ಅಂತ ರಾಗ ಹಾಕಲು ಸುರು ಮಾಡಿದಳು ಅವಳ ಪ್ರೇಮ ಪಾಶಕ್ಕೆ ಬಿದ್ದ ದೇವೇಂದ್ರ ಇನ್ನು ಹೆಚ್ಚು ಕುಡಿಯೋಕೆ ಮನೇಲಿ ಹಿಂಸೆ ಕೊಡೋಕೆ ಆರಂಬಮಾಡಿದ ಒಂದು ದಿನ ಸಂಜೆ ಮನೆಗೆ ಬಂದ ದೇವೇಂದ್ರನ ಕಾಣಿಗೆ ಉಮಾ ಕಾಣಿಸಲಿಲ್ಲ ಮೀರಾ ಉಮಾಳನ್ನು ಮನೆಯಿಂದ ಓಡಿಸಿದ್ದಾಳೆ ಅಂತ ಸಬೂಬು ತೆಗೆದು ಮನೆಯಿಂದ ಆಚೆ ನಡೆದುಬಿಟ್ಟ ದಿನಗಳು ಉರುಳುತ್ತಾ ಹೋದವು ದೇವೇಂದ್ರ ವಾಪಸ್ಸು ಮನೆಗೆ ಬರಲೇ ಇಲ್ಲ . ಮೀರಾ ಮತ್ತು ಮಕ್ಕಳು ದೇವೇಂದ್ರನ ದಾರಿ ಕಾಯುತ್ತ ಅಳುತ್ತಾ ಕೂಡುವುದೇ ಆಯಿತು ದಿನಗಳು ವಾರಗಳು ಸಾಗಿಹೊದವು ಮನೆಯ ಪರಿಸ್ತಿತಿ ತುಂಬಾ ಹಾಳಾಯಿತು ಪ್ರತಿದಿನ ಕಣ್ಣಿರಿನ ಜೀವನ ದೇವೇಂದ್ರ ಒಂದು ಕಾಗದ ಸಹ ಬರೆಯುವ ಗೋಜಿಗೆ ಹೋಗಲಿಲ್ಲ ಒಂದು ಫೋನ್ ಸೌಲಬ್ಯ ಸಹ ಇಲ್ಲ ದೇವೇಂದ್ರ ಯಲ್ಲಿ ಇದ್ದಾನೆ ಅನ್ನೋದೇ ಗೊತ್ತಿಲ್ಲ ರಾಣೆಬೇನ್ನುರಿಗೆ ಸಂದೇಶ ಕಳಿಸಬೇಕು ಅಂದ್ರೆ ಅಲ್ಲಿನ ವಿಳಾಸ ಸಹ ತಿಳಿದಿಲ್ಲ ಮೀರಾ ಮತ್ತು ಮಕ್ಕಳು ದಿಕ್ಕು ತೋಚದೆ ಏನು ಮಾಡಬೇಕು ಅಂತ ತಿಳಿಯದೆ ಕೇವಲ ಅಳುತ್ತಾ ಕುಳಿತುಕೊಳ್ಳುವುದು ಒಂದೇ ಮಾರ್ಗವಾದಂತೆ ಆಗಿದೆ. ಅಡುಗೆ ಮನೆ ಖಾಲಿ ಆಗಲು ಬಂತು ಇರುವ ಯಲ್ಲ ದವಸಧಾನ್ಯಗಳು ಮುಗಿಯಲು ಬಂತು ಇವತ್ತು ಒಂದು ಹೊತ್ತು ಅಡುಗೆ ಮಾಡಿಕೊಂಡರೆ ಆಯಿತು ರಾತ್ರಿಗೆ ಒಂದು ಹಿಡಿ ಅಕ್ಕಿ ಇಲ್ಲ ಮೀರಾ ಗರ್ಬಿಣಿ ಬೇರೆ ಮನೆಯಿಂದ ಆಚೆ ಹೋಗೋಹಾಗೆ ಇಲ್ಲ ಹೋದರೆ ಯಲ್ಲಿ ದೇವೇಂದ್ರ ಕೊಂದುಬಿದುತ್ತಾನೋ ಅನ್ನೋ ಭಯ ಬೇರೆ ಹೀಗೆ ದಿನಗಳು ಉರುಳುತ್ತಿವೆ ಮನೆಯಲ್ಲಿ ಉಟವೇ ಇಲ್ಲ ಎರಡು ದಿನವಾಯಿತು ಉಟ ಮಾಡಿ ಮಕ್ಕಳು ಹಸಿವೆಯಿಂದ ಅಳುತ್ತಾ ಇದ್ದಾರೆ ಯಾವ ಬಂದುಗಳು ಸಹ ಬಂದು ಸಹಾಯ ಮಾಡುವ ಪರಿಸ್ತಿತಿ ಇಲ್ಲ ಮೂರು ದಿನವಾಯಿತು ನಾಲ್ಕು ದಿನವಾಯಿತು ಅಯ್ಯೋ ಪಾಪ ಮನೆಯಿಂದ ಹೊರಗೆ ಸಹ ಹೋಗದ ಮೀರಾ ಅವತ್ತು ಪಕ್ಕದ ಮನೆಗೆ ಹೋಗಿ ಸ್ವಲ್ಪ ಅಕ್ಕಿ ಕೇಳಿ ತಂದು ಅಡುಗೆ ಮಾಡಿದಳು ಅವತ್ತು ಉಟ ಮಾಡಿದರು ಮತ್ತೆ ನಾಳೆಯ ಚಿಂತೆ ವೆಂಕಟೇಶ್ ಪ್ರತಿ ದಿನ ಮುಂಜಾನೆ ರೈಲ್ವೆ ಸ್ಟೇಷನ್ ಗೆ ಕುಡಿಯುವ ನೀರು ತರಲು ಹೋಗುತ್ತಿದ್ದ ಬೆಟಗೇರಿ ಪಟ್ಟಣದಲ್ಲಿ ನಗರಸಭೆಯ ನೀರು ಕುಡಿಯೋಕೆ ಆಗೋಲ್ಲ ವಾರಕ್ಕೊಮ್ಮೆ ಮಾತ್ರ ನೀರು ಬರುತ್ತಾ ಇತ್ತು ಅದನ್ನು ಶಖರಿಸಿಕೊಂಡರೆ ಮಾತ್ರ ಕುಡಿಯೋಕೆ ಆಗೋದು ಇಂತ ಸ್ತಿತಿಯಲ್ಲಿ ಬೆಟಗೇರಿ ಜನಕ್ಕೆ ರೈಲ್ವೆ ಸ್ಟೇಷನ್ ಒಂದು ರೀತಿ ಆಶೀರ್ವಾದ ಕೊಟ್ಟಿತ್ತು ಕುಡಿಯೋ ನೀರಿಗಾಗಿ ಅವತ್ತು ನೀರು ತುಂಬಲು ರೈಲ್ವೆ ಸ್ಟೇಷನ್ ಗೆ ಹೋದ ವೆಂಕಟೇಶ್ ಕಣ್ಣಿಗೆ ಕಂಡಿದ್ದು ರಾಶಿ ರಾಶಿ ಚಲ್ಲಿರುವ ಗೋದಿ ರೈಲ್ವೆ ಗೊದಾಂ ನಲ್ಲಿ ಲೋಡ್ ಮಾಡೋವಾಗ ರಸ್ತೆಗುಂಟ ಚಲ್ಲಿರುವ ಗೋದಿ ಹಸಿವೆ ನಿಗುತ್ತೆ ಅನ್ನೋ ಆಸೆ ನಾಲ್ಕನೇ ತರಗತಿಗೆ ಹೋಗೋ ವೆಂಕಟೇಶ್ ನಿಗೆ ಬಂತು ನೀರು ತರಲು ತೆಗೆದುಕೊಂಡು ಹೋದ ಕೊಡದಲ್ಲಿ ಗೋದಿಯನ್ನು ತುಂಬಿಸಿಕೊಂಡ ಎತ್ತಿಕೊಳ್ಳಲು ಆಗದೆ ಒದ್ದಾದಿಬಿಟ್ಟ ಅದರಲ್ಲಿ ಅರ್ದ ಚಲ್ಲಿ ಅರ್ದವನ್ನು ಹೇಗೋ ಎತ್ತಿಕೊಂಡು ಮನೆಕಡೆ ಸಾಗಿದ ಮನೆಯೊಳಗೇ ಸಹ ಹೋಗದೆ ಮನೆಯ ಹಿಂದೆ ಗೋದಿಯನ್ನು ಸುರುವಿ ಮತ್ತೆ ರೈಲ್ವೆ ಸ್ಟೇಷನ್ ಹೋರಟ ಹೀಗೆ ಎಷ್ಟೋ ಗೋದಿಯನ್ನು ಶಖರಿಸಿ ಮತ್ತೆ ಒಂದು ಕೊಡ ಕುಡಿಯುವ ನೀರನ್ನು ತಂದ ನೀರಿಗೆ ಹೋದ ಮಗ ಇನ್ನು ಯಾಕೆ ಬರಲಿಲ್ಲ ಅಂತ ಕಾಯುತ್ತ ಚಿಂತಿಸುತ್ತಾ ಕುಳಿತ ತಾಯಿ ಮಗ ಬಂದದನ್ನು ನೋಡಿ ಸಮಾಧಾನಗೊಂಡು ಯಾಕಪ್ಪ ಲೇಟಾಯ್ತು ಅಂತ ಕೇಳಿದಳು ಮಾತಾಡಲು ಸಹ ಕೊಡದೆ ತಾಯಿಯನ್ನು ಮನೆಯ ಹಿಂದೆ ಕರೆದುಕೊಂಡು ಹೋಗಿ ತಾನು ತಂದ ಗೋದಿಯನ್ನು ತೋರಿಸಿ ನಡೆದ ಸಂಗತಿ ಹೇಳಿದ ಮೀರಾಳ ಕಣ್ಣುಗಳು ತುಂಬಿ ಬಂದವು ಹೊಟ್ಟೆ ಹಸಿವು ನಿಗಿಸಿಕೊಳ್ಳಲು ಧಾನ್ಯ ಸಿಕ್ಕಿದೆ ಅಂತ ಖುಷಿ ಪಡಬೇಕೋ ಅಥವಾ ಮಗ ಮಾಡಿದ್ದು ತಪ್ಪು ಅಂತ ದುಕ್ಕಪದಬೇಕೋ ಒಂದು ತಿಳಿಯದೆ ಏನು ಮಾತಾಡದೆ ಸುಮ್ಮನಾದಳು ಮನೆಯಲ್ಲಿರುವ ಗೋದಿಯನ್ನು ಹಿಟ್ಟು ಮಾಡೋಕೆ ಕಾಸಿಲ್ಲ ಮನೆಲಿರುವ ಒಳ್ಳು (ಮೊದಲಿನ ಕಾಲದಲ್ಲಿ ಗೋದಿ ಬಿಸಲು ಉಪಯೋಗಿಸುತ್ತ್ತಿದ್ದ ಕಲ್ಲು) ಏನೋ ಒಂದು ಅಡುಗೆ ಮಾಡಿ ದೇವರ ಮುಂದೆ ತಂದು ದೇವರೇ ಇದೇನು ನಾನು ಏನು ತಪ್ಪು ಮಾಡಿದೆ ಅಂತ ಈ ಶಿಕ್ಷೆ ಮಗ ಮಾಡಿದ್ದು ತಪ್ಪು ಆದರೆ ಇದು ತಪ್ಪು ಹೀಗೆ ಮಾಡಬಾರದು ಅಂತ ಹೇಳೋ ಪರಿಸ್ತಿತಿ ಕೂಡ ನನಗಿಲ್ಲ ಹೊರಗೆ ಹೋಗಿ ದುಡಿದು ತರಬೇಕು ಅಂದ್ರೆ ನಾನು ಆ ಪರಿಸ್ತಿತಿಯಲ್ಲಿ ಸಹ ಇಲ್ಲ ಕಟ್ಟಿಕೊಂಡ ಗಂಡ ಅಯ್ಯೋ ದೇವರೇ ...... ಮಸಸಾಯಿಚ್ಚೆ ಅತ್ತು ತಾನೇ ಸಮಾಧಾನ ಮಾಡಿಕೊಂಡ ಮಾಡಿಕೊಂಡ ಅಡುಗೆಯನ್ನು ಮಕ್ಕಳಿಗೆ ಬಡಿಸಿ ತಾನು ತಿಂದಳು ಮಗ ಶಾಲೆಗೇ ಹೋದ ದಿನವುರುಳಿ ಸಂಜೆಯಾಯಿತು ವೆಂಕಟೇಶ್ ಮನೆಗೆ ಬಂದಾಗ ಕುಡಿದು ಮತ್ತಿನಲ್ಲಿರುವ ತಂದೇಯ ಸ್ವರ ಕೇಳಿದ ಕೂಗಾಡುತ್ತಿರುವ ಸ್ವರ ಕೇಳಿದ ಅಪ್ಪ ಬಂದಿದ್ದಾರೆ ಅನ್ನೋ ಖುಷಿಯಲ್ಲಿ ಅಪ್ಪನ ಹತ್ತಿರ ಹೋದ ವೆಂಕಟೇಶ್ ಕಿಟಾರನೆ ಕುರುಚಿಕೊಂಡ

ಮುಂದಿನ ಸಂಚಿಕೆಯಲ್ಲಿ 

No comments:

Post a Comment